ಬುಧವಾರ, ಜೂನ್ 23, 2021
22 °C

ದಾಳಿಂಬೆ ಸಾಲ ಮನ್ನಾ: ಕೇಂದ್ರಕ್ಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಳಿಂಬೆ ಸಾಲ ಮನ್ನಾ: ಕೇಂದ್ರಕ್ಕೆ ಪತ್ರ

ಬೆಂಗಳೂರು: ರಾಜ್ಯದ ದಾಳಿಂಬೆ ಬೆಳೆಗಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ಕೃಷಿ ಇಲಾಖೆ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ 2011-12ನೇ ಸಾಲಿನ `ಕೃಷಿ ರತ್ನ~, 2010-11ನೇ ಸಾಲಿನ `ಕೃಷಿ ಪಂಡಿತ~ ಹಾಗೂ ಬೆಳೆ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯದ 124 ತಾಲ್ಲೂಕುಗಳು ಬರಪೀಡಿತವಾಗಿವೆ. ಆ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಅರಿಶಿಣದ ಬೆಲೆ ಕುಸಿದಿದೆ. ಸರ್ಕಾರ ಅವರ ಬೆಂಬಲಕ್ಕೂ ಬರಲಿದೆ. ಭೂಚೇತನ ಕಾರ್ಯಕ್ರಮದಲ್ಲಿ 1.96 ಲಕ್ಷ ರೈತರು ಫಲಾನುಭವಿಗಳಾಗಿದ್ದಾರೆ ಎಂದರು.ಅತ್ಯಂತ ಕಡಿಮೆ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಪದ್ಧತಿ ಕುರಿತು ಅಧ್ಯಯನ ನಡೆಸಲು ರೈತರನ್ನು ಶ್ರೀಲಂಕಾ ಮತ್ತು ಇಸ್ರೇಲ್ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, `ನಂಜುಂಡಸ್ವಾಮಿ ಅವರ ಜನ್ಮದಿನವನ್ನು (ಫೆಬ್ರುವರಿ 13) ರೈತರ ದಿನವಾಗಿ ಆಚರಿಸಬೇಕು. ಕೇಂದ್ರ ಸರ್ಕಾರ ಸ್ಥಾಪಿಸಿರುವ ರಾಷ್ಟ್ರೀಯ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗದ ಮಾದರಿಯಲ್ಲೇ ರಾಜ್ಯ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗ ರಚಿಸಬೇಕು~ ಎಂದು ಸರ್ಕಾರವನ್ನು ಒತ್ತಾಯಿಸಿದರು.

 

ಎಂಡಿಎನ್‌ಗೆ ಮರಣೋತ್ತರ ಪ್ರಶಸ್ತಿ

ಬೆಂಗಳೂರು: ರೈತ ಹೋರಾಟಗಾರ, ರಾಜ್ಯ ರೈತ ಸಂಘದ ಸ್ಥಾಪಕರಲ್ಲಿ ಒಬ್ಬರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರವಾಗಿ `ಕೃಷಿ ರತ್ನ~ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಪುತ್ರ ಪಚ್ಚೆ ನಂಜುಂಡಸ್ವಾಮಿ ಅವರು ಡಿ.ವಿ. ಸದಾನಂದ ಗೌಡರಿಂದ ಪ್ರಶಸ್ತಿ ಸ್ವೀಕರಿಸಿದರು. ಅಲ್ಲದೆ, `ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನ~ಕ್ಕೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಕೃಷಿ ಸಚಿವ ಉಮೇಶ ಕತ್ತಿ, ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ, ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್, ಕೃಷಿ ಇಲಾಖೆ ಕಾರ್ಯದರ್ಶಿ ಡಾ. ಬಾಬುರಾವ್ ಮುಡಬಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.`ಕೃಷಿ ಪಂಡಿತ~ ಪ್ರಶಸ್ತಿ ಪಡೆದ ಸಾಧಕರ ಹೆಸರು ಇಲ್ಲಿದೆ: ದುರುಗದ ಬಸವ್ವ ಮತ್ತು ಡಿ. ಮಾನಪ್ಪ, ಹರಪನಹಳ್ಳಿ; ಧನಪಾಲ ನಾನಪ್ಪ ಯಲ್ಲಟ್ಟಿ, ಜಮಖಂಡಿ; ಶ್ರೀನಿವಾಸ, ಶ್ರೀರಂಗಪಟ್ಟಣ; ಟಿ.ಆರ್. ವಿಜಯಕುಮಾರ್, ಕೊರಟಗೆರೆ; ಶಿವಲೀಲಾ ಚಂದ್ರಶೇಖರ ಗಾಣೆಗೇರ, ಗೋಕಾಕ; ಎನ್. ರಮೇಶ್, ಚಿಕ್ಕಬಳ್ಳಾಪುರ; ಸಿದ್ದಲಿಂಗಯ್ಯ, ತುಮಕೂರು; ಸಂಗನಗೌಡ ಗೋವಿಂದಗೌಡ ಕರಿಗೌಡರ, ಮುಂಡರಗಿ; ಎಚ್.ಕೆ. ಮಂಜುನಾಥ, ಅರಸೀಕೆರೆ; ಕೆ.ಎಸ್. ಕನ್ನಂಗಿ ಶೇಷಾದ್ರಿ, ತೀರ್ಥಹಳ್ಳಿ.ಪಿ. ಶಂಕರ ಭಟ್ಟ, ಬಂಟ್ವಾಳ; ಶಾಂತಾ ಶೃಂಗೇಶ್ವರ ಭಟ್ಟ, ಅರಸೀಕೆರೆ; ಮಲ್ಲೇಶ ಗೌಡ, ಲಿಂಗಸುಗೂರು; ಎಂ. ಕೆಂಪಯ್ಯ, ತಿಮ್ಮನಾಯಕನಹಳ್ಳಿ; ಅಶೋಕ ಮಲ್ಲನಗೌಡ ಪಾಟೀಲ, ಹುಕ್ಕೇರಿ; ಪಾರ್ವತಿ ಮಲ್ಲನಗೌಡ ರುದ್ರಗೌಡರ ಮತ್ತು ಮಲ್ಲನಗೌಡ ಸಾಹೇಬಗೌಡ ರುದ್ರಗೌಡರ, ಜಮಖಂಡಿ; ಕೆ.ಬಿ. ಗುರುಪ್ರಸಾದ್, ಬೆಂಗಳೂರು ದಕ್ಷಿಣ; ಮಹಾಂತಯ್ಯ ಸಂಗಯ್ಯ ಮಠ, ಬಾದಾಮಿ; ಎ.ಎನ್. ಆಂಜನೇಯ, ಹರಿಹರ; ಟಿ. ಅನಿಲ್ ಕುಮಾರ್, ಗಂಗಾವತಿ; ಬಾವುರಾಜ ರಾಯಗೊಂಡಪ್ಪ ಬಸರಗಿ, ಅಥಣಿ.ಪೂರ್ಣಾನಂದ ವೆಂಕಟೇಶ ಭಟ್ಟ, ಅಂಕೋಲಾ; ಗುರುಲಿಂಗಯ್ಯ ಬಾಳಯ್ಯ ಸಾಲಿಮಠ, ಅಥಣಿ; ಆರ್. ಜಯಸುಂದರ ನಾಯ್ಡು, ಕೊಳ್ಳೇಗಾಲ; ಚಂದ್ರಶೇಖರ ಬಸವಗೌಡ ಪಾಟೀಲ, ಕಲಘಟಗಿ; ಬಾಹುಬಲಿ ವಾರಿಶೇನ ಕುಮಾರ ಐನಾಪುರೆ, ರಾಯಬಾಗ.ಬೆಳೆ ಸ್ಪರ್ಧೆ ವಿಜೇತರು: ಬಾಬುರಾವ್ ಮಲ್ಲಪ್ಪ ಜಾಧವ, ಹುಬ್ಬಳ್ಳಿ; ಸುರೇಶ ಪರಪ್ಪ ಕಬಾಡಗಿ, ಜಮಖಂಡಿ; ಜಿ. ವೀರಮ್ಮ, ಹೊನ್ನಾಳಿ; ಮುರಳೀಧರ ಮಲ್ಹಾರ ಕುಲಕರ್ಣಿ, ಶಿಗ್ಗಾವಿ; ಎಸ್. ರೇವಣಪ್ಪ, ಹೊನ್ನಾಳಿ; ಎಚ್. ಶೇಖರಪ್ಪ, ಹೊನ್ನಾಳಿ; ಜಗದೀಶ ಕಬಾಡಗಿ, ಜಮಖಂಡಿ; ರಾಜುಗೌಡ ಬಾಹುಗೌಡ ಪಾಟೀಲ, ಜಮಖಂಡಿ; ಮಹಾಲಿಂಗಪ್ಪ ಭೀಮಪ್ಪ ಮರನೂರ, ಮುಧೋಳ. ಬಸಂತ್ರಾಯ ಬಾಬಣ್ಣ ಚಿಂಚೋಳಿ, ಮುದ್ದೇಬಿಹಾಳ; ಸುಶೀಲಾಬಾಯಿ ಚಂದ್ರಶೇಖರ ಡೆಂಗಿನವರ, ವಿಜಾಪುರ; ಸುಭಾಷ ಬಸವಂತರಾಯ ಚಿಂಚೋಳಿ, ಮುದ್ದೇಬಿಹಾಳ; ಸವಿತಾ ಅಣ್ಣಪ್ಪ ಲೆಂಕಣ್ಣವರ, ಬೀಳಗಿ; ಸಗರೆಪ್ಪ ರಂಗಪ್ಪ ನ್ಯಾಮಗೌಡ, ಜಮಖಂಡಿ; ಬಿ.ಡಿ. ಕೋಟ್ರೇಶ್, ದಾವಣಗೆರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.