ದಾಳಿಕೋರರಲ್ಲಿ ಬ್ರಿಟನ್‌ ಮಹಿಳೆ

7

ದಾಳಿಕೋರರಲ್ಲಿ ಬ್ರಿಟನ್‌ ಮಹಿಳೆ

Published:
Updated:
ದಾಳಿಕೋರರಲ್ಲಿ ಬ್ರಿಟನ್‌ ಮಹಿಳೆ

ನ್ಯೂಯಾರ್ಕ್, ಲಂಡನ್ (ಎಎಫ್‌ಪಿ, ಪಿಟಿಐ): ನೈರೋಬಿ ಮಾಲ್‌ ಮೇಲೆ ದಾಳಿ ನಡೆಸಿದ ಉಗ್ರರಲ್ಲಿ ಇಬ್ಬರು  ಅಮೆರಿಕ ಪ್ರಜೆಗಳು ಮತ್ತು ಬ್ರಿಟನ್ ಮಹಿಳೆ­ಯೊಬ್ಬಳು ಸೇರಿದ್ದಾರೆ ಎಂದು ಕೀನ್ಯಾ ವಿದೇಶಾಂಗ ಸಚಿವೆ ಅಮೀನಾ ಮೊಹಮ್ಮದ್‌ ಹೇಳಿದ್ದಾರೆ.ಮಾಲ್‌ ಮೇಲಿನ ದಾಳಿ­ಯಲ್ಲಿ ಭಾಗಿ­ಯಾಗಿರುವ ಬ್ರಿಟನ್‌ ಮಹಿಳೆ ಶಂಕಿತ ಭಯೋತ್ಪಾದಕಿ ಸಮಂತಾ ಲೆಥ್‌ವೇಟ್‌ ಆಗಿರುವ ಸಾಧ್ಯತೆ ಇದೆ ಎಂದು ಹೇಳ­ಲಾಗುತ್ತಿದೆ.ಲಂಡನ್‌ ಮೇಲಿನ 7/7 ದಾಳಿಯಲ್ಲಿ ಭಾಗಿಯಾಗಿದ್ದ ಆತ್ಮಹತ್ಯಾ ಬಾಂಬರ್‌ ಜರ್ಮೈನ್‌ ಲಿಂಡ್ಸೆಯನ್ನು ಲೆಥ್‌ವೇಟ್‌ ಮದುವೆಯಾಗಿದ್ದಳು.

‘ಶ್ವೇತ ವರ್ಣದ ವಿಧವೆ’ ಎಂದು ಕರೆಯಲಾಗುವ ಲೆಥ್‌ವೇಟ್‌ ಪೂರ್ವ ಆಫ್ರಿಕಾ ಮೂಲದವಳಾಗಿದ್ದು, ಕೀನ್ಯಾದ ಕರಾವಳಿ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದ ಭಯೋತ್ಪಾದನಾ ಸಂಘ­ಟನೆ­ಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪ­ದಲ್ಲಿ ಆಕೆ ಪೊಲೀಸರಿಗೆ ಬೇಕಾಗಿದ್ದಾಳೆ.

ಲೆಥ್‌ವೇಟ್‌ ಸೋಮಾಲಿಯಾಕ್ಕೆ ಪರಾರಿ­ಯಾಗಿದ್ದಾಳೆ. ಆಕೆ ಬಳಿ ಹಲವು ಗುರುತಿನ ಪತ್ರಗಳಿವೆ ಎಂದು ಕಳೆದ ಮಾರ್ಚ್‌ನಲ್ಲಿ ಬ್ರಿಟನ್‌ ಅಧಿಕಾರಿಗಳು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry