ದಾಳಿಗೊಳಗಾದ ಜಿಂಕೆಗೆ `ಜೀವ'

ಶನಿವಾರ, ಜೂಲೈ 20, 2019
24 °C

ದಾಳಿಗೊಳಗಾದ ಜಿಂಕೆಗೆ `ಜೀವ'

Published:
Updated:

ಗುಡಗೇರಿ: ಗ್ರಾಮದ ಹೊರವಲಯದಲ್ಲಿ ನಾಯಿಗಳ ದಾಳಿಯಿಂದಾಗಿ ಕಕ್ಕಾಬಿಕ್ಕಿಯಾಗಿ ನಿಂತಿದ್ದ ಜಿಂಕೆಯೊಂದನ್ನು ಮಂಜುನಾಥ ಗೋವಿಂದಪ್ಪ ಜಂತ್ಲಿ ಎಂಬ ಯುವಕ ರಕ್ಷಿಸಿ ಪೋಲಿಸ್ ಠಾಣೆಗೆ ತಂದೊಪ್ಪಿಸಿದ ಘಟನೆ ಜರುಗಿದೆ.ಪೊಲೀಸ್ ಠಾಣೆಯಲ್ಲಿ ಜಿಂಕೆಗೆ ಉಪಚಾರ ಮಾಡಿದ ನಂತರ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಯಿತು.ಠಾಣೆಗೆ ಬಂದ ಉಪವಲಯ ಅರಣ್ಯಾಧಿಕಾರಿ ಎಸ್.ಎಚ್. ತಡಕೋಡ, ವೀಕ್ಷಕ ಎನ್. ಜಿ.ಶಿರಹಟ್ಟಿ  ಅವರಿಗೆ ಪಿಎಸ್‌ಐ ಸುರೇಶ.ಆರ್. ಗಡ್ಡಿ, ಸಿಬ್ಬಂದಿ ಆರ್.ಪಿ. ವಾಲೀಕಾರ , ಡಿ .ವಿ. ಪಾಟೀಲ, ಪವಾಡಶೆಟ್ಟರ,  ಆರ್.ಎಂ. ಶಂಕಿನದಾಸರ ಅವರು ಜಿಂಕೆಯನ್ನು ಒಪ್ಪಿಸಿದರು. ಜಿಂಕೆಯನ್ನು ಬಿಂಕದಕಟ್ಟೆ ಮೃಗಾಲಯಕ್ಕೆ ತಲುಪಿಸುವುದಾಗಿ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry