ದಾಳಿ ತಡೆಗೆ ಒಬಾಮ ಷರತ್ತು

7

ದಾಳಿ ತಡೆಗೆ ಒಬಾಮ ಷರತ್ತು

Published:
Updated:

ವಾಷಿಂಗ್ಟನ್‌ (ಪಿಟಿಐ): ಸಿರಿಯಾ ಮೇಲಿನ ದಾಳಿಗೆ ಸಂಸತ್‌ನ ಬೆಂಬಲ ಸಿಗುವ ಬಗ್ಗೆ ಅನುಮಾನಗೊಂಡಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು, ಒಂದೊಮ್ಮೆ ಸಿರಿಯಾ ಅಧ್ಯಕ್ಷ ಬಷರ್‌ ಅಸಾ್ಸದ್‌ ತಮ್ಮ ರಾಷ್ಟ್ರದ ರಾಸಾಯನಿಕ  ಅಸ್ತ್ರಗಳ ದಾಸಾ್ತನನು್ನ ಅಂತರರಾಷ್ಟ್ರೀಯ ನಿಯಂತ್ರಣಕೆ್ಕ ಒಳ-­ಪಡಿಸಲು ಒಪ್ಪಿದ್ದೇ ಆದರೆ ದಾಳಿ-ಯನು್ನ ಖಂಡಿತವಾಗಿಯೂ ತಡೆಹಿಡಿಯುವು­ದಾಗಿ ಪ್ರಕಟಿಸಿದಾ್ದರೆ.ಸಿರಿಯಾದಲ್ಲಿರುವ ರಾಸಾಯನಿಕ ಶಸಾ್ತ್ರಸ್ತ್ರಗಳ ದಾಸಾ್ತನನು್ನ ಅಂತರ­ರಾಷ್ಟ್ರೀಯ ನಿಯಂತ್ರಣಕೆ್ಕ ಒಳಪಡಿಸುವ ನಿಟಿ್ಟನಲಿ್ಲ ಆ ರಾಷ್ಟ್ರದ ಆಡಳಿತದ ಮೇಲೆ ಒತ್ತಡ ಹೆಚಿ್ಚಸಬೇಕೆಂಬ ರಷಾ್ಯದ ಸಲಹೆಯನು್ನು್ನ ಅನುಮಾನದಿಂದ ಕೂಡಿದ ಗಂಭೀರತೆಯೊಂದಿಗೆ ಪರಿಶೀಲಿಸುತ್ತಿ­ರು­ವುದಾಗಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದಾ್ದರೆ.ರಾಷ್ಟ್ರೀಯ ಭದ್ರತೆಯ ದೃಷಿ್ಟಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸೇನಾ ದಾಳಿ ನಡೆಸದೇ ಇದಕ್ಕೆ ಸಿರಿಯಾ ಒಪಿ್ಪಕೊಂಡಿದ್ದೇ ಆದರೆ ಅದು ಅತ್ಯಂತ ಖುಷಿಯ ಸಂಗತಿಯಾಗಲಿದೆ. ಆದರೆ, ಈಗ ಸಿರಿಯಾವನು್ನ ಒಪ್ಪಿಸುವ ನಿಟಿ್ಟನಲಿ್ಲ ತಡಮಾಡದೇ ಮುಂದುವರಿಯುವುದೇ ಅತ್ಯಂತ ಮುಖ್ಯ ಎಂದು ಅಭಿಪಾ್ರಯಪಟ್ಟರು.

‘ಸಿರಿಯಾ ಮೇಲೆ ಸೇನಾ ದಾಳಿಯ ಸಾಧ್ಯತೆಯನು್ನ ನಾವು ಸ್ಪಷ್ಟವಾಗಿ ಪ್ರಕಟಿಸದೇ ಹೋಗಿದ್ದರೆ ಇಂಥದ್ದೊಂದು ಪ್ರಸಾ್ತಪ ಕೇಳಿಬರುತ್ತಲೇ ಇರಲಿಲ್ಲ. ರಾಸಾ­ಯನಿಕ ಅಸ್ತ್ರಗಳನು್ನ ಬಳಕೆ ಮಾಡ-­ಬಾರದೆಂಬ ಜಾಗತಿಕ ನಿಬಂಧನೆಯು ಉಲ್ಲಂಘನೆ ಆಗಬಾರದೆಂಬ ವಿಷಯ­ದಲಿ್ಲ ನಾವು ಯಾವುದೇ ರಾಜಿಗೆ ಸಿದ್ಧವಿಲ್ಲ’ ಎಂದರು.‘ಸಿರಿಯಾ ಬಿಕ್ಕಟ್ಟನ್ನು ರಾಜತಾಂತಿ್ರಕ ಮಾರ್ಗೋಪಾಯದ ಮೂಲಕವೇ ಬಗೆಹರಿಸಬೇಕು ಎಂಬುದಕ್ಕೇ ಮೊದಲಿ­ನಿಂದಲೂ ಒತ್ತು ನೀಡುತಾ್ತ ಬಂದಿದ್ದೇನೆ. ಸೇನಾ ದಾಳಿ ನಡೆಸದೆಯೂ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ನನ್ನ ದೃಢವಾದ ಆತ್ಮವಿಶಾ್ವಸವಾಗಿದೆ’ ಎಂದರು.‘ಸಿರಿಯಾ ಮೇಲೆ ದಾಳಿ ನಡೆಸಲು ಸಂಸತ್‌ ಒಪಿ್ಪಗೆ ನೀಡುವ ಬಗ್ಗೆ ನನಗೆ ಆತ್ಮವಿಶಾ್ವಸ ಇಲ್ಲ. ಸಂಸದರು ಈ ಕುರಿತು ಎಲಾ್ಲ ಆಯಾಮಗಳಿಂದಲೂ ಬಹಳ ಗಂಭೀರವಾಗಿ ಚರ್ಚೆ ನಡೆಸು­ತ್ತಿದಾ್ದರೆ. ಇಂತಹ ಚರ್ಚೆ ಸ್ವಾಗತಾರ್ಹ ಕೂಡ’ ಎಂದರು.ಸಂಸತ್‌ನ ಒಪ್ಪಿಗೆ ಇಲ್ಲದಿದ್ದರೂ ದಾಳಿ ನಡೆಸುವ ಬಗ್ಗೆ ತಾವು ನಿರ್ಧಾರ ತೆಗೆದುಕೊಂಡಿಲ್ಲ ಎಂದೂ ಅವರು ಇದೇ ವೇಳೆ ಪ್ರಶೆ್ನಯೊಂದಕೆ್ಕ ಉತ್ತರಿಸಿದರು.

ಸಿರಿಯಾ ಮೇಲಿನ ದಾಳಿಗೆ ಪ್ರತಿಪಕ್ಷವಾದ ರಿಪಬಿ್ಲಕನ್‌ ಸಂಸದರು ಮಾತ್ರವಲ್ಲದೆ ತಮ್ಮದೇ ಡೆಮಾಕಾ್ರಟ್‌ ಪಕ್ಷದ ಕೆಲವು ಸಂಸದರಿಂದಲೂ ಒಬಾಮ ತೀವ್ರ ವಿರೋಧ ಎದುರಿಸುತ್ತಿದಾ್ದರೆ. ಇದೇ ವೇಳೆ, ಸಿರಿಯಾ ಮೇಲಿನ ದಾಳಿಗೆ ಸಂಬಂಧಿಸಿದಂತೆ ಒಬಾಮ ಆಡಳಿತಕೆ್ಕ ಸಂಸತ್‌ನಲಿ್ಲ 50 ಸದಸ್ಯ ಬಲದ ಕೊರತೆ ಎದುರಾಗಬಹುದೆಂದು ಸಮೀಕ್ಷೆ­ಯೊಂದು ಅಂದಾಜಿಸಿದೆ.

ದಾಳಿಯಿಂದ ಪಾರಾಗಲು ಸಿರಿಯಾ ಒಪ್ಪಿಗೆ

ಮಾಸ್ಕೊ:  ಅಮೆರಿಕದ ದಾಳಿ ತಪ್ಪಿಸಿಕೊಳ್ಳಲು ತನ್ನಲ್ಲಿರುವ ರಾಸಾಯನಿಕ ಅಸ್ತ್ರಗಳ ದಾಸಾ್ತನನು್ನ ಅಂತರರಾಷ್ಟ್ರೀಯ ನಿಯಂತ್ರಣಕೆ್ಕ ಒಳಪಡಿಸ­ಬೇಕು ಎಂಬ ರಷ್ಯಾದ ಸಲಹೆಯನು್ನ ಸಿರಿಯಾ ಒಪಿ್ಪಕೊಂಡಿದೆ ಎನ್ನಲಾಗಿದೆ. ಭಾರತವು ಇದನು್ನ ಒಂದು ಸಕಾರಾತ್ಮಕ ಬೆಳವಣಿಗೆ ಎಂದು ಸಾ್ವಗತಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry