ಸೋಮವಾರ, ಜೂನ್ 21, 2021
29 °C

ದಾಳಿ: ನಕಲಿ ಬಿಸ್ಕಿಟ್ ಪತ್ತೆ, ಸಾಮಗ್ರಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನಗರದ ಹೊರ ವಲಯದಲ್ಲಿರುವ ಒಂದು ಆಹಾರ ಸಂಸ್ಕರಣಾ ಘಟಕ ಹಾಗೂ ಎರಡು ಪಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾಶೀನಾಥ ಪವಾರ ಬುಧವಾರ ದಾಳಿ ನಡೆಸಿದರು.`ರಾಮ್‌ಪ್ರಸಾದ್ ಫುಡ್ ಪ್ರಾಡಕ್ಟ್ ಹೆಸರಿನ ಘಟಕದಲ್ಲಿ ಬ್ರ್ಯಾಂಡೆಂಡ್ ಕಂಪೆನಿಗಳ ಬಿಸ್ಕತ್‌ಗಳ ಪೊಟ್ಟಣಗಳಲ್ಲಿ ನಕಲಿ ಬಿಸ್ಕತ್‌ಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ಘಟಕ ಆರಂಭಿಸಲು ಆರೋಗ್ಯ ಇಲಾಖೆಯ ಅನುಮತಿಯನ್ನೂ ಪಡೆದಿರಲಿಲ್ಲ. ಘಟಕದ ಮಾಲೀಕ ಪ್ರವೀಣ ಪಾಂಡೆ ವಿರುದ್ಧ ಇಲ್ಲಿಯ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ~ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಲಕ್ಕಣ್ಣವರ ತಿಳಿಸಿದ್ದಾರೆ.ಇಲ್ಲಿ ಮೂರು ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಹಾರ ಸಾಮಗ್ರಿಗಳನ್ನು ತಪಾಸಣೆಗೆ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಹೇಳಿದ್ದಾರೆ.`ಜಿಲ್ಲೆಯಲ್ಲಿ 22 ಪಾಕೇಜ್ಡ್ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಎರಡು ಘಟಕದವರು ಮಾತ್ರ ಐಎಸ್‌ಐ ಗುರುತು ಹೊಂದಿದ್ದಾರೆ. ತಿಂಗಳ ಹಿಂದೆಯೇ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಸೃಷ್ಟಿ ಹಾಗೂ ರುಚಿ ಹೆಸರಿನ ಘಟಕಗಳ ಮೇಲೆ ದಾಳಿ ನಡೆಸಿ, ಗೋಲಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು~ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.