ಭಾನುವಾರ, ಆಗಸ್ಟ್ 1, 2021
21 °C

ದಾಳಿ ನಡೆಸಿದ್ದ ಹುಲಿ ಈಗ ಸಿಂಹಧಾಮದ ಅತಿಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:ಶಿಕಾರಿಪುರದ ಗಾಮ ಗ್ರಾಮದ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಈಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಅತಿಥಿಯಾಗಿದೆ.ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡ ಈ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಇಲ್ಲಿಗೆ ಕರೆ ತಂದಿದ್ದಾರೆ. ಹುಲಿ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಅಕ್ಕಪಕ್ಕ ಗ್ರಾಮಗಳ ಜನರನ್ನು ಬಿಡಿಸಿಕೊಂಡು ಹುಲಿಯನ್ನು ಹಿಡಿಯುವುದು ಸಾಹಸವೇ ಆಗಿತ್ತು. ಅರಣ್ಯ ಇಲಾಖೆಯೂ ಹುಲಿಯನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಈ ಹುಲಿಯನ್ನು ಮತ್ತೆ ಕಾಡಿಗೆ ಬಿಡಬೇಕೆ? ಅಥವಾ ಹುಲಿ-ಸಿಂಹಧಾಮದಲ್ಲೇ ಇಟ್ಟುಕೊಳ್ಳಬೇಕೆ? ಎಂಬ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದಾರೆ. ಇದು ಅಂದಾಜು 10 ವರ್ಷದ ಹುಲಿಯಾಗಿದ್ದು, ಕಾಡಿನ ಆಸ್ತಿ. ಕಾಡಿನಲ್ಲೇ ಉಳಿಯಬೇಕೆಂಬ ಚಿಂತನೆಯೂ ಇದೆ. ಹುಲಿ ಸದ್ಯ ಆರೋಗ್ಯವಾಗಿದೆ. ಈ ಹುಲಿ ಎಲ್ಲಿಂದ ಬಂತು ಎಂಬ ಬಗ್ಗೆಯೂ ಈಗ ಪರಿಶೀಲನೆ ನಡೆದಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಟಿ.ಜಿ. ರವಿಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.