ಗುರುವಾರ , ಏಪ್ರಿಲ್ 15, 2021
21 °C

ದಾವಣಗೆರೆ: ಮೌಲ್ಯಮಾಪಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವೇತನ ತಾರತಮ್ಯ, ಕಾಲ್ಪನಿಕ ಬಡ್ತಿ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದವರು ಶುಕ್ರವಾರ ಪಿಯು ಮೌಲ್ಯಮಾಪನ ಸಂದರ್ಭ ಲೇಖನಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಪಿಯು ಉಪನ್ಯಾಸಕರು 18 ವರ್ಷಗಳಿಂದ ವೇತನ ಶ್ರೇಣಿಯ ತಾರತಮ್ಯ ನಿವಾರಿಸುವಂತೆ ಒತ್ತಾಯಿಸುತ್ತಿದ್ದರೂ ಬೇಡಿಕೆಗಳು ಈಡೇರಿಲ್ಲ. ಸಂಘದಿಂದ ಪತ್ರ ಚಳವಳಿ ಮಾಡಿ ಮನವಿ ನೀಡಿದರೂ ಸರ್ಕಾರ ಕಣ್ತೆರೆದಿಲ್ಲ. ಆದ್ದರಿಂದ ಲೇಖನಿ ಸ್ಥಗಿತ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾನಿರತ ಉಪನ್ಯಾಸಕರು ತಿಳಿಸಿದರು.ವೇತನ ತಾರತಮ್ಯ ಹೋಗಲಾಡಿಸಿ ಮಧ್ಯಂತರ ಪರಿಹಾರ ಭತ್ಯೆಯನ್ನು ಕೂಡಲೇ ನೀಡಬೇಕು. ಅನುದಾನಿತ ಮತ್ತು ಗುತ್ತಿಗೆ ಆಧಾರಿತ ಉಪನ್ಯಾಸಕರಿಗೆ ಕಾಲ್ಪನಿಕ ವೇತನ ಬಡ್ತಿಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು. 6ನೇ ವೇತನ ಆಯೋಗದ ಶಿಫಾರಸನ್ನು ಯಥಾವತ್ತಾಗಿ ಜಾರಿಗೆ ತರಬೇಕು. ದೈಹಿಕ ಶಿಕ್ಷಕರು, ಗ್ರಂಥಪಾಲಕರ ನೇಮಕಾತಿಗೆ ಅನುಮತಿ, ಉಪನ್ಯಾಸಕರಿಗೆ ಸಮಾ ನಾಂತರ ವೇತನ ಜಾರಿಗೊಳಿಸಬೇಕು. ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಬೇಕು. ಅನುದಾನರಹಿತ ಪದವಿಪೂರ್ವ ಕಾಲೇಜಿನ ಸಿಬ್ಬಂದಿಗೆ ಸೇವಾ ಭದ್ರತೆಯೊಂದಿಗೆ ಎಲ್ಲ ಸೌಲಭ್ಯ ಗಳನ್ನು ಯಥಾವತ್ತಾಗಿ ಜಾರಿಗೊಳಿಸ ಬೇಕು ಎಂದು ಒತ್ತಾಯಿಸಿದರು.ಜಿಎಂಐಟಿ ಪಿಯು ಕಾಲೇಜು, ಮಾಗನೂರು ಬಸಪ್ಪ ಪಿಯು ಕಾಲೇಜು ಮತ್ತು ಸಿದ್ಧಗಂಗಾ ಪಿಯು ಕಾಲೇಜುಗಳಲ್ಲಿ ಉಪನ್ಯಾಸ ಕರು ಮೌಲ್ಯಮಾಪನ ಸ್ಥಗಿತಗೊಳಿಸಿದರು. ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಉಪನ್ಯಾಸಕರಾದ ಸಿ. ವೀರಣ್ಣ, ಮಂಜುನಾಥ ರೆಡ್ಡಿ, ನಾಗರಾಜಪ್ಪ, ಶಿವಮೊಗ್ಗ ಖಲೀಂಉಲ್ಲಾ, ನಾಗಪ್ಪ, ಮಂಜುನಾಥ ರೆಡ್ಡಿ, ಆನಂದ್, ತಿಪ್ಪೇಸ್ವಾಮಿ ಮತ್ತಿತರರು ನೇತೃತ್ವ ವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.