ದಾವಣಗೆರೆ ವಿ.ವಿ. ಕುಲಪತಿ ಆಯ್ಕೆ ಸಮಿತಿಗೆ ಅನಂತಮೂರ್ತಿ ನೇಮಕ

7

ದಾವಣಗೆರೆ ವಿ.ವಿ. ಕುಲಪತಿ ಆಯ್ಕೆ ಸಮಿತಿಗೆ ಅನಂತಮೂರ್ತಿ ನೇಮಕ

Published:
Updated:

ಬೆಂಗಳೂರು: ದಾವಣಗೆರೆ ವಿಶ್ವವಿದ್ಯಾ­ಲ­ಯದ ಕುಲಪತಿ ನೇಮಕ ಸಂಬಂಧ ರಚನೆಯಾಗಲಿರುವ ಶೋಧನಾ ಸಮಿತಿಗೆ ಸರ್ಕಾರದ ಪ್ರತಿನಿಧಿಯಾಗಿ ಖ್ಯಾತ ಸಾಹಿತಿ ಪ್ರೊ.ಯು.ಆರ್‌.­ಅನಂತಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.ಸಿಂಡಿಕೇಟ್‌ ಪ್ರತಿನಿಧಿಯಾಗಿ ಪ್ರೊ.ಸುಖದೇವ್‌ ಥೋರಟ್ ನೇಮಕವಾಗಿದ್ದಾರೆ. ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ಪ್ರತಿನಿಧಿಗಳ ನೇಮಕ­ವಾದ ನಂತರ ಸರ್ಕಾರ ಶೋಧನಾ ಸಮಿತಿ ರಚಿಸಲಿದೆ.ಸಾಮಾನ್ಯವಾಗಿ ಸರ್ಕಾರದ ಪ್ರತಿನಿಧಿ ಶೋಧನಾ ಸಮಿತಿ ಅಧ್ಯಕ್ಷ­ರಾಗುತ್ತಾರೆ. ಹೀಗಾಗಿ ಅನಂತ­ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚನೆಯಾಗ­ಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry