ಗುರುವಾರ , ಮೇ 13, 2021
24 °C

ದಾವಣಗೆರೆ ವಿವಿ: ಸಿಂಡಿಕೇಟ್ ಸದಸ್ಯತ್ವ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಆರು ಮಂದಿ ಸಿಂಡಿಕೇಟ್  ಸದಸ್ಯರನ್ನು ಪದಚ್ಯುತಿಗೊಳಿಸಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ.ನಾಲ್ಕು ವರ್ಷಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಈ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಒಂದು ವರ್ಷದ ಹಿಂದೆ ಈ ಆರು ಸದಸ್ಯರನ್ನು ನೇಮಿಸಲಾಗಿತ್ತು.ಎನ್.ಲಿಂಗಣ್ಣ, ಪ್ರೇಮಾ, ರಮಾ ನಾಗರಾಜ್, ಚಂದ್ರಕಾಂತ್, ಜಿ.ಕೆ.ಸುರೇಶ್, ಸಿದ್ದರಾಮಣ್ಣ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ಮುಕ್ತಗೊಳಿಸಲಾಗಿದೆ.ಉನ್ನತ ಶಿಕ್ಷಣ ಇಲಾಖೆ ಜೂನ್ 15ರಂದು ಹೊರಡಿಸಿರುವ ಆದೇಶದಲ್ಲಿ ಆರು ಜನರ ಸದಸ್ಯತ್ವ ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.