ದಾವೂದ್‌ ಆಸ್ತಿ ಮುಟ್ಟುಗೋಲು

7

ದಾವೂದ್‌ ಆಸ್ತಿ ಮುಟ್ಟುಗೋಲು

Published:
Updated:

ಕಠ್ಮಂಡು (ಪಿಟಿಐ): ಭಾರತಕ್ಕೆ ತೀರಾ ಬೇಕಾದ ಪಾತಕಿಯಾದ ದಾವೂದ್‌ ಇಬ್ರಾಹಿಂ ಸೇರಿದಂತೆ 200ಕ್ಕೂ ಹೆಚ್ಚು ದುಷ್ಕರ್ಮಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನೇಪಾಳ ಸರ್ಕಾರವು ಮಂಗಳವಾರ ಆದೇಶ ಹೊರಡಿಸಿದೆ.ಅಲ್‌ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದಾಕ್ಕಾಗಿ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರವು 224 ವ್ಯಕ್ತಿಗಳ ಹಾಗೂ 64 ಸಂಘಟನೆಗಳ ಆಸಿ್ತಗಳನು್ನ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ಅಂತರರಾಷ್ಟ್ರೀಯ ಭಯೋತಾ್ಪದನಾ ಜಾಲದೊಂದಿಗೆ ಸಂಪರ್ಕ ಹೊಂದಿದಾ್ದರೆಂದು ಗುರುತಿಸಿ ವಿಶ್ವಸಂಸೆ್ಥ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಪ್ರಕಟಿಸಿರುವ ವ್ಯಕಿ್ತಗಳು ಹಾಗೂ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ವಕಾ್ತರ ಶಂಕರ್‌ ಪ್ರಸಾದ್‌ ಕೊಯಿರಾಲಾ ಸುದಿ್ದಸಂಸೆ್ಥಗೆ ತಿಳಿಸಿದರು.ವಿಶ್ವಸಂಸೆ್ಥ ಭದ್ರತಾ ಮಂಡಳಿ ಅಂಗೀಕರಿಸಿರುವ ನಿರ್ಣಯ­ಗಳ ಪ್ರಕಾರ, ಯಾವುದೇ ಸದಸ್ಯ ರಾಷ್ಟ್ರವು, ಉಗ್ರರ ಜಾಲದೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳ ಹಾಗೂ ಸಂಘಟನೆಗಳ ಆಸಿ್ತಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು; ಅಲ್ಲದೇ, ಅಂಥವರ ಪ್ರಯಾಣಕ್ಕೂ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.‘ದಾವೂದ್‌ಹಾಗೂ ಇತರರ ವಿರುದ್ಧದ ಈ ಕಠಿಣ ಕ್ರಮವು ವಿಶ್ವಸಂಸ್ಥೆಯ ತತ್ವಗಳಿಗೆ ನಮ್ಮ (ನೇಪಾಳದ) ಬದ್ಧತೆಯನು್ನ ಶು್ರತಪಡಿಸುತ್ತದೆ. ಅಕ್ರಮ ಲೇವಾದೇವಿ ತಡೆ ಕಾಯ್ದೆಯ ಪರಿಣಾಮಕಾರಿ ಅನುಷಾ್ಠನಕ್ಕಾಗಿ ನಾವು ದೃಢ  ಸಂಕಲ್ಪ ಮಾಡಿರುವುದಕ್ಕೂ ಇದು ನಿದರ್ಶನ’ ಎಂದು ಕೊಯಿರಾಲ ಹೇಳಿದರು.ಪಾಕಿಸಾ್ತನಿ ಬೆಂಬಲಿತ ಉಗ್ರರು ಹಾಗೂ ಭಯೋತಾ್ಪದಕ ಸಂಘಟನೆಗಳಿಗೆ ಸೇರಿದವರು ತಮ್ಮ ಪಾತಕ ಕೃತ್ಯಗಳಿಗೆ ನೇಪಾಳವನು್ನ ನುಸುಳು ಮಾರ್ಗವನಾ್ನಗಿ ಬಳಸಿಕೊಳ್ಳುತ್ತಿದಾ್ದರೆ ಎಂದು ಭಾರತದ ಭದ್ರತಾ ಪಡೆಗಳು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿವೆ.

ಲಷ್ಕರ್‌ ಎ ತೈಯಬಾದ (ಎಲ್‌ಇಟಿ) ಸಂಚುಕೋರ ಅಬ್ದುಲ್‌ ಕರೀಂ ತುಂಡಾ ಮತ್ತು ಇಂಡಿಯನ್‌ ಮುಜಾಹಿದೀನ್‌ ಉಗ್ರ ಯಾಸೀನ್‌ ಭಟ್ಕಳ ಅವರು ಸೆರೆಯಾಗಿದ್ದು ಕೂಡ ಭಾರತ– ನೇಪಾಳ ಗಡಿಯಲ್ಲೇ ಎಂಬುದು ಗಮನಾರ್ಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry