ದಾವೂದ್‌ ಪಾಕ್‌ನಲ್ಲಿ ಇಲ್ಲ: ಅಜೀಜ್‌

7

ದಾವೂದ್‌ ಪಾಕ್‌ನಲ್ಲಿ ಇಲ್ಲ: ಅಜೀಜ್‌

Published:
Updated:

ನ್ಯೂಯಾರ್ಕ್‌ (ಪಿಟಿಐ): ಭಾರತಕ್ಕೆ ಅತ್ಯಂತ ಬೇಕಾಗಿರುವ (‘ಮೊಸ್ಟ್ ವಾಂಟೆಂಡ್‌’) ಉಗ್ರ ದಾವೂದ್‌ ಇ್ರಬಾಹಿಂ ಪಾಕಿಸ್ತಾನ­ದಲ್ಲಿಲ್ಲ ಎಂದು ಪಾಕ್‌ನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಇಲ್ಲಿ ಹೇಳಿದರು.‘ದಾವೂದ್‌ನನ್ನು ಭಾರತಕ್ಕೆ ಹಸ್ತಾಂ­ತರ ಮಾಡುವುದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಮಾತುಕತೆ ಮತ್ತು ಚರ್ಚೆ ನಡೆದಿವೆ. ಆತ ಪಾಕಿಸ್ತಾನದಲ್ಲಿ ಇಲ್ಲ’ ಎಂದು ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತೆ ಮೇಲಿನ ಪಾಕ್‌ ಪ್ರಧಾನಿಯವರ ಸಲಹೆಗಾರ ಸರ್ತಾಜ್‌ ಅಜೀಜ್‌ ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry