ದಾವೂದ್ ಸಹಚರರ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ

5

ದಾವೂದ್ ಸಹಚರರ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ

Published:
Updated:

ವಾಷಿಂಗ್ಟನ್ (ಪಿಟಿಐ): ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರರಾದ ಚೋಟಾ ಶಕೀಲ್ ಮತ್ತು ಟೈಗರ್ ಮೆಮನ್ ಅವರನ್ನು ಮಾದಕ ವಸ್ತುಗಳ ಕಳ್ಳಸಾಗಣೆದಾರರು ಎಂದು ಅಮೆರಿಕದ ಹಣಕಾಸು ಇಲಾಖೆ ಘೋಷಿಸಿದ್ದು, ಅವರ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದೆ.

20 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಸರಣಿ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಟೈಗರ್ ಮೆಮನ್ ಹಾಗೂ ಚೋಟಾ ಶಕೀಲ್ ಅವರನ್ನು ದಕ್ಷಿಣ ಏಷ್ಯಾದ ಮಾದಕ ವಸ್ತು ಕಳ್ಳಸಾಗಣೆ ಜಾಲದ ಸೂತ್ರದಾರರು ಎಂದು ಅಮೆರಿಕದ ಹಣಕಾಸು ಇಲಾಖೆ ಘೋಷಿಸಿದೆ.

ದಾವೂದ್ ಇಬ್ರಾಹಿಂನ  `ಡಿ~ ಕಂಪೆನಿಯ  ಚೋಟಾ ಹಾಗೂ ಮೆಮನ್ ಅವರನ್ನು `ಭಯೋತ್ಪಾದಕತೆಯ ಹಿಂದಿನ ಸಂಚುಕೋರರು~ ಎಂದು ಬಣ್ಣಿಸಿದೆ.

ಈಗಾಗಲೇ ದಾವೂದ್‌ನನ್ನು `ಜಾಗತಿಕ ಭಯೋತ್ಪಾದಕ~ ಎಂದು ಹೆಸರಿಸಿರುವ ಅಮೆರಿಕ, `ವಿದೇಶಿ ಮಾದಕ ವಸ್ತುಗಳ ಕಳ್ಳಸಾಗಣೆದಾರ~ ಎಂದೂ ಮತ್ತು ಆತನ ಸಂಘಟನೆಯನ್ನು `ಮಾದಕ ವಸ್ತುಕಳ್ಳಸಾಗಣೆ ಸಂಸ್ಥೆ~ ಎಂದು ಘೋಷಿಸಿದೆ.  ಈ ಕಳ್ಳಸಾಗಣೆದಾರರ ಜತೆ ಅಮೆರಿಕದ ನಾಗರಿಕರು ಆರ್ಥಿಕ ಮತ್ತು ವಾಣಿಜ್ಯ ವ್ಯವಹಾರಗಳನ್ನು ಇಟ್ಟುಕೊಳ್ಳಬಾರದು ಎಂದು ಹಣಕಾಸು ಇಲಾಖೆ ನಿರ್ಬಂಧ ವಿಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry