ದಾಸರಿ ವಾಣಿ

7

ದಾಸರಿ ವಾಣಿ

Published:
Updated:

ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಇಳಿದಿರುವ ದಾಸರಿ ಕಿರಣ್ ಅವರಿಗೆ `ಜೀನಿಯಸ್' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತದೆ ಎಂಬ ಆತ್ಮವಿಶ್ವಾಸ. `ಜೀನಿಯಸ್ ಸಿನಿಮಾದ ಚಿತ್ರಕಥೆ ಹಾಗೂ ವಿಭಿನ್ನ ನಿರೂಪಣೆಯೇ ನಮ್ಮ ಚಿತ್ರದ ಗೆಲುವಿಗೆ ಬಲ' ಎನ್ನುತ್ತಾರೆ ದಾಸರಿ.`ಜೀನಿಯಸ್ ನನ್ನ ಮೊದಲ ನಿರ್ಮಾಣವಿರಬಹುದು. ಆದರೆ ಚಿತ್ರಕ್ಕೆ ಭರ್ಜರಿ ಯಶಸ್ಸು ಲಭಿಸುವುದರಲ್ಲಿ ಅನುಮಾನವಿಲ್ಲ. ನನಗೆ ಚಿತ್ರದ ನಿರ್ದೇಶಕರ ತಾಕತ್ತಿನ ಬಗ್ಗೆ ನಂಬಿಕೆ. ಅವರಿಗೆ ಒಂದು ಚಿತ್ರವನ್ನು ಗೆಲ್ಲಿಸುವ ಶಕ್ತಿ ಇದೆ ಎಂಬುದನ್ನು ಬಲ್ಲೆ. ಸಿನಿಮಾ ಮಾಡಲು ನಾವು ಆಯ್ದುಕೊಂಡಿರುವ ವಿಷಯ ಹಾಗೂ ಅದನ್ನು ನಿರೂಪಣೆ ಮಾಡಿರುವ ರೀತಿ ಈ ಚಿತ್ರದ ಹೈಲೈಟ್. ಚಿತ್ರವನ್ನು ಪ್ರೇಕ್ಷಕರು ಖಂಡಿತವಾಗಿಯೂ ಇಷ್ಟಪಡುತ್ತಾರೆ. ನನಗಂತೂ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಅರಿಯುವ ಹಂಬಲ ಹೆಚ್ಚಾಗಿದೆ' ಎಂದು ಚಿತ್ರದ ಬಗ್ಗೆ ಅಭಿಮಾನದಿಂದ ಮಾತನಾಡುತ್ತಿದ್ದಾರೆ ಅವರು.ಅಂದಹಾಗೆ, ಈ ಚಿತ್ರದಲ್ಲಿ ಇಂದಿನ ಯುವಜನತೆಯಲ್ಲಿ ಬದಲಾಗುತ್ತಿರುವ ಧೋರಣೆಯನ್ನು ವಿಭಿನ್ನ ರೀತಿಯಲ್ಲಿ ತೋರಿಸಲಾಗಿದೆಯಂತೆ. ಈ ಚಿತ್ರವನ್ನು ಟೀವಿ ಆ್ಯಂಕರ್ ಆಗಿದ್ದ ಓಂಕಾರ್ ಅವರು ನಿರ್ದೇಶನ ಮಾಡಿದ್ದಾರೆ. ಹವೀಶ್, ಸನುಷಾ, ಅಶ್ವಿನ್ ಬಾಬು. ವಿನೋದ್ ಮತ್ತು ಅಭಿನಯ ಪ್ರಮುಖ ಪಾತ್ರದಲ್ಲಿದ್ದಾರೆ. ತಮಿಳು ನಟ ಶರತ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಹನ್ನೊಂದೂವರೆ ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಡಿಸೆಂಬರ್ 21ಕ್ಕೆ ತೆರೆ ಕಾಣಲಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry