ದಾಸೋಹ ಅಮೂಲ್ಯ ತತ್ವಗಳಲ್ಲೊಂದು

ಶುಕ್ರವಾರ, ಜೂಲೈ 19, 2019
23 °C

ದಾಸೋಹ ಅಮೂಲ್ಯ ತತ್ವಗಳಲ್ಲೊಂದು

Published:
Updated:

ಗುಲ್ಬರ್ಗ: ಬಸವಾದಿ ಪ್ರಮಥರು ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆಯೆಂದರೆ ದಾಸೋಹ, ಕಾಯಕ ಮತ್ತು ಪ್ರಸಾದಗಳಂತಹ ತತ್ವಗಳು. ಕಾಯಕದಿಂದ ಬಂದ ದ್ರವ್ಯವನ್ನು ಸಮಾಜಕ್ಕೆ ಅರ್ಪಿಸುವುದೇ ನಿಜವಾದ ದಾಸೋಹ. ದಾಸೋಹಕ್ಕೆ ನಿಷ್ಕಾಮ ಫಲ ಪ್ರಸಾದವಾಗಿದೆ ಎಂದು ಹಾರಕೂಡ- ಚಿಂಚೋಳಿ ಶ್ರೀ ಮಠದ ಚನ್ನವೀರ ಶಿವಾಚಾರ್ಯ ನುಡಿದರು.ಚಿಂಚೋಳಿ ತಾಲ್ಲೂಕಿನ ತೇಗಲತಿಪ್ಪಿ ಗ್ರಾಮದಲ್ಲಿ  ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಧಾರ್ಮಿಕ ಚಿಂತನೆಗಳಿಂದ ಮನುಷ್ಯನ ಮಾನಸಿಕ ಸ್ಥಿತಿ ಸದೃಢಗೊಂಡು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪಟ್ಟಣ ಪ್ರದೇಶದ ಜನರ ಸಂಬಂಧಕ್ಕಿಂತ ಗ್ರಾಮೀಣ ಜನತೆಯಲ್ಲಿನ ಪ್ರಿತಿ-ಪ್ರೇಮ ಸಂಬಂಧಗಳು ಬಹುದೊಡ್ಡದಾಗಿರುತ್ತದೆ ಎಂದರು.ಸೋಮನಾಥ ಅಲ್ಲಾಪುರ, ಚಂದ್ರಶೇಖರ ಪಾಟೀಲ, ಗುಂಡಪ್ಪ ರಡ್ಡಿ, ಘಾಳೆಪ್ಪ ಬಿಟ್ಟಿ, ಅಶೋಕ ಮಾಲಿಪಾಟೀಲ, ಬಿ.ಎಂ.ಪಾಟೀಲ ಕಲ್ಲೂರ, ಶಿವಕುಮಾರ ಪಾಟೀಲ, ನಾಗೇಂದ್ರಪ್ಪ ಪಾಟೀಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry