`ದಾಸ್ತಾನು ಮಳಿಗೆಗಳಲ್ಲಿ ಆಹಾರ ನಷ್ಟ ತಪ್ಪಿಸಿ'

7

`ದಾಸ್ತಾನು ಮಳಿಗೆಗಳಲ್ಲಿ ಆಹಾರ ನಷ್ಟ ತಪ್ಪಿಸಿ'

Published:
Updated:
`ದಾಸ್ತಾನು ಮಳಿಗೆಗಳಲ್ಲಿ ಆಹಾರ ನಷ್ಟ ತಪ್ಪಿಸಿ'

ಯಲಹಂಕ: `ದೇಶದ ಆಹಾರ ಉತ್ಪಾದನೆ ಹೆಚ್ಚಿಸುವ ಮೂಲಕ ದಾಸ್ತಾನು ಮಳಿಗೆಗಳಲ್ಲಿ ಆಹಾರ ನಷ್ಟವಾಗುವುದನ್ನು ತಪ್ಪಿಸಬೇಕು. ಜೊತೆಗೆ ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ಆಹಾರ ಭದ್ರತೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ' ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಭಿಪ್ರಾಯಪಟ್ಟರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಕರ್ನಾಟಕ ಶಾಖೆಯ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ `ಆಹಾರ ಭದ್ರತೆ ಕಾಯಿದೆ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಪಡಿತರ ವಿತರಣೆಯಲ್ಲಿ ನ್ಯಾಯಬೆಲೆ ಅಂಗಡಿಯವರಿಗೆ ಬರುವ ಕಮಿಷನ್ ಮೊತ್ತ ತುಂಬಾ ಕಡಿಮೆಯಿರುವುದರಿಂದ ಅವರು ಹೆಚ್ಚಿನ ಆದಾಯಕ್ಕಾಗಿ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಇದರಿಂದ ಸೋರಿಕೆಯುಂಟಾಗಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದ್ದು, ಕಮಿಷನ್ ಮೊತ್ತವನ್ನು ಹೆಚ್ಚಿಸುವುದರಿಂದ ಇಂತಹ ಸೋರಿಕೆ ಪ್ರಮಾಣ ತಡೆಯಬಹುದು' ಎಂದು ಸಲಹೆ ನೀಡಿದರು.`ರತ್ನ ಮತ್ತು ಆಭರಣಗಳ ಆಮದು ಸುಂಕವನ್ನು ಮನ್ನಾ ಮಾಡಿರುವುದಕ್ಕೆ ದೇಶಕ್ಕೆ ್ಙ 75,000 ಕೋಟಿಗಳಷ್ಟು ಆದಾಯ ಕಡಿಮೆಯಾಗಿದೆ. ಆದರೆ ಆಹಾರ ಭದ್ರತೆ ಕಾಯಿದೆಗೆ ಖರ್ಚು ಮಾಡಬೇಕಾಗಿರುವುದು ್ಙ 30 ಸಾವಿರ ಕೋಟಿ. ಇದರಿಂದ ಆರ್ಥಿಕತೆಗೆ ತೊಂದರೆಯಾಗಲಿದೆ ಎಂದು ಮಾತು ಕೇಳಿ ಬರುತ್ತಿದೆ. ಆದರೆ, ಸಮಸ್ಯೆ ಅಷ್ಟೊಂದು ತೀವ್ರವಾಗುವುದಿಲ್ಲ' ಎಂದು ಹೇಳಿದರು.ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಕರ್ನಾಟಕ ಶಾಖೆಯ ಅಧ್ಯಕ್ಷಎಸ್.ರಾಮನಾಥನ್ ಮಾತನಾಡಿ, ಆಹಾರ ಭದ್ರತೆ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗಲು ಸಾಕಷ್ಟು ಆಹಾರ ಉತ್ಪಾದನೆ ಮಾಡುವುದರ ಜೊತೆಗೆ ಉತ್ಪಾದಿಸಿದ ಆಹಾರವನ್ನು ಸಮರ್ಪಕವಾಗಿ ದಾಸ್ತಾನು ಮಾಡುವ ಸೌಲಭ್ಯವಿರಬೇಕು. ಅಲ್ಲದೆ ಅದನ್ನು ವಿತರಣೆ ಮಾಡುವಲ್ಲಿ ಪ್ರಾಮಾಣಿಕತೆಯಿರಬೇಕು. ಇದನ್ನು ಜಾರಿಗೊಳಿಸುವ ಜವಾಬ್ದಾರಿ ಎಲ್ಲ ರಾಜ್ಯ ಸರ್ಕಾರಗಳ ಮೇಲಿದೆ' ಎಂದರು.ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ. ನಾರಾಯಣಗೌಡ, `ಆಹಾರ ಉತ್ಪಾದನೆ ಹೆಚ್ಚಿಸುವುದು ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಿಂದ 50 ವರ್ಷಗಳಲ್ಲಿ 186 ಅಧಿಕ ಇಳುವರಿಯ ಮತ್ತು ಸಂಕರಣ ತಳಿಗಳನ್ನು ಹೊರತರಲಾಗಿದೆ. ಸರ್ಕಾರದ ಜೊತೆಗೆ ಕೈಜೋಡಿಸುವ ಮೂಲಕ ಆಹಾರ ಭದ್ರತೆ ಕಾಯಿದೆ ಮಾತ್ರವಲ್ಲದೆ ಆಹಾರ ಉತ್ಪಾದನೆಯಲ್ಲೂ ಪರಿಣಾಮಕಾರಿಯಾದ ಪಾತ್ರ ವಹಿಸುತ್ತೇವೆ' ಎಂದು ಭರವಸೆ ನೀಡಿದರು.ಶಾಖೆಯ ಉಪಾಧ್ಯಕ್ಷ ಡಾ.ಡಿ.ಶ್ರೀನಿವಾಸನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಎಂ.ಎ. ಶಂಕರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry