ದಿಗ್ಗಜರ ಜತೆ ದೀಪಾ ಪೈಪೋಟಿ

ರಿಯೊ ಡಿ ಜನೈರೊ: ರಿಯೊ ಕೂಟದ ಜಿಮ್ನಾಸ್ಟಿಕ್ಸ್ನಲ್ಲಿ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ದೀಪಾ ಕರ್ಮಾಕರ್ ಭಾನುವಾರ ವಿಶ್ವದ ಘಟಾನುಘಟಿಗಳ ಜತೆ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಮಹಿಳೆಯರ ಜಿಮ್ನಾಸ್ಟಿಕ್ಸ್ನ ವಾಲ್ಟ್ ವಿಭಾಗದ ಫೈನಲ್ ಭಾರತೀಯ ಕಾಲಮಾನ ಭಾನುವಾರ ರಾತ್ರಿ 11. 17 ರಿಂದ ಆರಂಭವಾಗಲಿದೆ. ದೀಪಾ ಸೇರಿ ದಂತೆ ಒಟ್ಟು ಎಂಟು ಮಂದಿ ಕಣದಲ್ಲಿದ್ದಾರೆ.
ಒಲಿಂಪಿಕ್ಸ್ಗೆ ಅರ್ಹತೆ ಪಡೆದಾಗಲೇ ದೀಪಾ ಹೆಸರು ಚರಿತ್ರೆಯ ಪುಟಗಳಲ್ಲಿ ಸೇರಿತ್ತು. ಏಕೆಂದರೆ ಭಾರತದ ಯಾವುದೇ ಮಹಿಳಾ ಜಿಮ್ನಾಸ್ಟ್ ಒಮ್ಮೆಯೂ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿರಲಿಲ್ಲ.
ತ್ರಿಪುರಾದ ಈ ಜಿಮ್ನಾಸ್ಟ್ ಅರ್ಹತಾ ಹಂತದಲ್ಲಿ ಎಂಟನೇ ಸ್ಥಾನ ಪಡೆದಿದ್ದರು. ದೀಪಾ ಫೈನಲ್ನಲ್ಲೂ ‘ಪ್ರೊಡುನೋವಾ ವಾಲ್ಟ್’ ಕಸರತ್ತು ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.
ಪ್ರಸ್ತುತ ವಿಶ್ವದ ಅತ್ಯುತ್ತಮ ಜಿಮ್ನಾಸ್ಟ್ ಎನಿಸಿರುವ ಅಮೆರಿಕದ ಸಿಮೊನಾ ಬಿಲ್ಸ್ ಅವರು ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. ಉತ್ತರ ಕೊರಿಯಾದ ಹಾಂಗ್ ಉನ್ ಜಾಂಗ್, ರಷ್ಯಾದ ಮರಿಯಾ ಪಸೆಕಾ ಮತ್ತು ಉಜ್ಬೆಕಿಸ್ತಾನದ ಒಕ್ಸಾನಾ ಚುಸೊವಿತಾನ ಅವರೂ ಪದಕದ ನಿರೀಕ್ಷೆಯಲ್ಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.