ದಿನಕರನ್ ಅರ್ಜಿ: ಕಾಯ್ದಿರಿಸಿದ ತೀರ್ಪು

ಬುಧವಾರ, ಜೂಲೈ 17, 2019
27 °C

ದಿನಕರನ್ ಅರ್ಜಿ: ಕಾಯ್ದಿರಿಸಿದ ತೀರ್ಪು

Published:
Updated:

ನವದೆಹಲಿ (ಐಎಎಎಸ್): ತಮ್ಮ ವಿರುದ್ಧದ ಭ್ರಷ್ಟಾಚಾರ, ಭೂ ಹಗರಣ, ಆದಾಯಕ್ಕಿಂತ ಹೆಚ್ಚು ಆಸ್ತಿ ಮತ್ತು ದುರ್ನಡತೆ ಆರೋಪಗಳ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿಗಳ ವಿಚಾರಣಾ ಸಮಿತಿ (ಜೆಐಸಿ) ಸಲ್ಲಿಸಿರುವ ಆರೋಪಗಳ ವರದಿಯನ್ನು ಪ್ರಶ್ನಿಸಿ ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಬುಧವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿತು.ಜೆಐಸಿ ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿ, ಅದರಾಚೆಗಿನ ಆರೋಪಗಳನ್ನು ತಮ್ಮ ಮೇಲೆ  ಹೊರಿಸಿದೆ ಎಂದು ಆರೋಪಿಸಿ ಜೆಐಸಿ ವರದಿ ವಿರುದ್ಧ ದಿನಕರನ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠ, ತೀರ್ಪನ್ನು ಕಾಯ್ದಿರಿಸಿತು.ದಿನಕರನ್ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪಣೆ ನೋಟಿಸನ್ನು ಯಥಾವತ್ತಾಗಿ ಮುಂದೆ ಸಾಗಿಸುವುದಕ್ಕೆ ಜೆಐಸಿ ಅಂಚೆ ಕಚೇರಿಯಲ್ಲ ಎಂದು ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕಿಡಿಕಾರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry