ದಿನಗೂಲಿ ನೌಕರರಿಗೆ ಭಡ್ತಿ ನೀಡಿ

7

ದಿನಗೂಲಿ ನೌಕರರಿಗೆ ಭಡ್ತಿ ನೀಡಿ

Published:
Updated:

ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಕರ್ನಾಟಕ ಸರ್ಕಾರ 1990ರಲ್ಲಿ ಸೂಪರ್‌ನ್ಯೂಮರಿ        (ಸಂಖ್ಯಾತಿರಿಕ್ತ) ಹುದ್ದೆಯಲ್ಲಿ ಅವರ ಸೇವೆಯನ್ನು ಖಾಯಂ ಮಾಡಿತು. ಅಂದಿನಿಂದ (22 ವರ್ಷ) ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತ್ದ್ದಿದು, ಬಡ್ತಿ ಮರೀಚಿಕೆಯಾಗಿದೆ.ಸೂಪರ್‌ನ್ಯೂಮರಿ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಷ್ಟಿಸಲಾಗಿತ್ತು. ಈ ಹುದ್ದೆಗಳಲ್ಲಿರುವ ನೌಕರರನ್ನು  ಖಾಲಿ ಹುದ್ದೆಗಳಿಗೆ ಮರು ವಿನ್ಯಾಸಗೊಳಿಸಿದ ನಂತರ ಹಾಗೂ ಅವರ ಹೆಸರು ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ. ಆ ಬಳಿಕವೇ ಭಡ್ತಿಗೆ ಪರಿಗಣಿಸಬಹುದು ಎಂಬ ಸರ್ಕಾರದ ನಿಯಮವನ್ನು ಪಾಲಿಸಬೇಕೆಂದು ವಿನಂತಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry