ದಿನದಿನವೂ ನಾಗಪಂಚಮಿ

7

ದಿನದಿನವೂ ನಾಗಪಂಚಮಿ

Published:
Updated:

ಗ್ರಾಫಿಕ್ ತಂತ್ರಜ್ಞಾನದಿಂದ ಸಮೃದ್ಧವಾದ `ನಾಗಪಂಚಮಿ~ ದೈನಿಕ ಧಾರಾವಾಹಿ ಫೆ.6ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅಕ್ಕತಂಗಿಯರ ಸುತ್ತ ಹೆಣೆಯಲಾದ ಹೂ-ಹಾವಿನ ಕಥೆ ಈ ಧಾರಾವಾಹಿಯದಾಗಿದ್ದು, ಬಾಲಿವುಡ್‌ನ `ಕ್ರಿಷ್~ ಮತ್ತು `ಕೋಯಿ ಮಿಲ್ ಗಯಾ~ ಚಿತ್ರಗಳಿಗೆ ಗ್ರಾಫಿಕ್ ಡಿಸೈನ್ ಮಾಡಿದ ಯುನಸ್ ಬುಕಾರಿ ಈ `ನಾಗಪಂಚಮಿ~ಗೆ ಅದ್ಭುತ ಗ್ರಾಫಿಕ್ ಡಿಸೈನ್ ಮಾಡಿದ್ದಾರಂತೆ.`ವಿಭಿನ್ನ ಕಥೆ, ತಾಂತ್ರಿಕ ಕೌಶಲದ ಈ ಧಾರಾವಾಹಿಯ ಪ್ರತಿ ಕಂತನ್ನೂ ಕುತೂಹಲಕರವಾಗಿ ನಿರೂಪಿಸಲಾಗುವುದು. ಕಥೆಯ ನೈಜತೆಯ ಕಾರಣಕ್ಕೋಸ್ಕರ ಧಾರಾವಾಹಿಯ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯ ಹರೂರಿನಲ್ಲಿರುವ ಪ್ರಾಚೀನ ದೇವಸ್ಥಾನದಲ್ಲಿ ನಡೆಸಲಾಗಿದೆ.ಕನ್ನಡ ಕಿರುತೆರೆಯಲ್ಲಿ 3ಡಿ ಸ್ಪೆಷಲ್ ಎಫೆಕ್ಟ್ಸ್ ಬಳಸಿ ರೂಪಿಸಿರುವ ಮೊದಲ ಧಾರಾವಾಹಿ ಇದು~ ಎಂದು `ನಾಗಪಂಚಮಿ~ಯ ನಿರ್ದೇಶಕ ವಿಘ್ನೇಶ್ ರಾವ್ ತಿಳಿಸಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6ಕ್ಕೆ `ನಾಗಪಂಚಮಿ~ ಪ್ರಸಾರವಾಗಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry