ಶನಿವಾರ, ಮಾರ್ಚ್ 6, 2021
30 °C

ದಿನಪತ್ರಿಕೆ ವಿತರಕ ಹುಡುಗರಿಗೆ ನಂದಿನಿ ಬಡಾವಣೆಯಲ್ಲಿ ಆಶ್ರಯ ತಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿನಪತ್ರಿಕೆ ವಿತರಕ ಹುಡುಗರಿಗೆ ನಂದಿನಿ ಬಡಾವಣೆಯಲ್ಲಿ ಆಶ್ರಯ ತಾಣ

ಬೆಂಗಳೂರು: ದಿನಪತ್ರಿಕೆಗಳನ್ನು ವಿತರಿಸುವ ಹುಡುಗರಿಗೂ ಒಂದು ಆಸರೆ. ಮಳೆ, ಗಾಳಿಯಿಂದ ರಕ್ಷಣೆ ಇಲ್ಲದೆ ತಡಕಾಡುತ್ತಿದ್ದ ದಿನ ಪತ್ರಿಕೆ ವಿತರಕ ಹುಡುಗರಿಗೆಂದೇ ಒಂದು ಆಶ್ರಯ ತಾಣವನ್ನು ನಿರ್ಮಿಸಿ ಕೊಟ್ಟಿರುವ ಅಪರೂಪದ ವಿಷಯ ಇಲ್ಲಿದೆ. ಮಹಾಲಕ್ಷ್ಮೀಪುರ ವಿಧಾನ ಸಭಾಕ್ಷೇತ್ರದ ಶಾಸಕ ನೆ.ಲ.ನರೇಂದ್ರಬಾಬು ನಂದಿನಿ ಬಡಾವಣೆಯ ರಾಮಕೃಷ್ಣ ಉದ್ಯಾನವನದಲ್ಲಿ ಶಾಸಕರ ನಿಧಿಯಿಂದ ಈ ಆಸರೆ ಕಲಿಸಿದ್ದಾರೆ.

 

ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು, ಕಾಯಕದಲ್ಲಿ ನಿರತರಾಗುವ ಪತ್ರಿಕಾ ವಿತರಕರಿಗೆ ಇದೊಂದು ವರದಾನವಾಗಿದೆ ಎಂದು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ರಾಜು ಹರ್ಷ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.