ದಿನೇಶ್ ಅಮಿನ್‌ಮಟ್ಟುಗೆ ಪಾಂಡೇಶ್ವರ ಪ್ರಶಸ್ತಿ

7

ದಿನೇಶ್ ಅಮಿನ್‌ಮಟ್ಟುಗೆ ಪಾಂಡೇಶ್ವರ ಪ್ರಶಸ್ತಿ

Published:
Updated:

ಧಾರವಾಡ: ಇಲ್ಲಿನ ಅವನಿ ರಸಿಕರ ರಂಗ `ಪ್ರಜಾವಾಣಿ~ ಪತ್ರಿಕೆಯ ಸಹಾಯಕ ಸಂಪಾದಕ ದಿನೇಶ ಅಮಿನ್‌ಮಟ್ಟು ಅವರಿಗೆ ಪ್ರತಿಷ್ಠಿತ ಜಿ.ಆರ್.ಪಾಂಡೇಶ್ವರ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ಪ್ರಕಟಿಸಿದೆ.ಪ್ರಶಸ್ತಿಯು 5000 ರೂ. ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಎ.ಸಿ.ಗೋಪಾಲ ಹಾಗೂ ಡಾ. ಎಂ.ಗಂಗಾಧರಪ್ಪ ಅವರನ್ನೊಳಗೊಂಡ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯ ಆಯ್ಕೆ ಸಮಿತಿ ಅಮಿನ್‌ಮಟ್ಟು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry