ದಿರಿಸಿನ ದನಿ : ಗುಟ್ಟೊಂದು ಹೇಳುವೆ

7

ದಿರಿಸಿನ ದನಿ : ಗುಟ್ಟೊಂದು ಹೇಳುವೆ

Published:
Updated:
ದಿರಿಸಿನ ದನಿ : ಗುಟ್ಟೊಂದು ಹೇಳುವೆ

ಲೈಂಗಿಕ ಬಯಕೆಗಳನ್ನು ಹತ್ತಿಕ್ಕಲಾಗಲೀ ಬಯಕೆಗಳಿಗೆ ನಿರುತ್ಸಾಹ ತೋರಿಸಲಾಗಲೀ ದೇಹದ ಕೆಲವು ಭಾಗಗಳನ್ನು ಮುಚ್ಚಿಡುವ ಅಭ್ಯಾಸ ಬೆಳೆದುಬಂದಿಲ್ಲ. ಹಾಗೆಂದೇ ಕೆಲವು ಆಧುನಿಕ ಲೇಖಕರು ಹೇಳುವುದು. ಈ ದೃಷ್ಟಿಯಿಂದ ನೋಡಿದರೆ ಮೈಮೇಲಿನ ಬಟ್ಟೆ ಎಂದರೆ ಅದು ‘ನೋಡು, ನನ್ನತ್ರ ಗುಟ್ಟಿದೆ’ ಎಂದು ಹೇಳಿದಂತೆಯೇ ಲೆಕ್ಕ. ಅದೇ ಧಾಟಿಯಲ್ಲಿ ಕೆಣಕಿ ಕರೆದಂತೆ. ಲೈಂಗಿಕವಾಗಿ ಪ್ರಚೋದನೆ ನೀಡಬಹುದಾದ ಕೆಲವು ನಿರ್ದಿಷ್ಟ ದೇಹಭಾಗಗಳನ್ನು ಹೇಗೆ ಮುಚ್ಚಿ ಇರಿಸಲಾಗುತ್ತದೆ ಎಂದರೆ ಅವುಗಳ ವೈಭವೀಕರಣವಾಗುತ್ತದೆ; ಅತ್ತಲೇ ಲಕ್ಷ್ಯ ಹೋಗುತ್ತದೆ.ಹೊಳೆ ಹೊಳೆವ ದಿರಿಸಿನಲ್ಲಿ ಮಿಂಚುವವರನ್ನು ಕಂಡರೆ ಬರ್ತ್‌ಡೇ ಗಿಫ್ಟ್ ಮೇಲಿನ ರ್ಯಾಪರ್‌ನಂತೆ ಎನಿಸುತ್ತದೆ. ‘ನಮ್ಮನ್ನು ತೆರೆದು ನೋಡುವ ಕುತೂಹಲ ಹುಟ್ಟದೆ? ಬನ್ನಿ ಬಿಚ್ಚಿ ನೋಡಿ’ ಎಂದು ಕರೆದಂತೆನಿಸುತ್ತದಂತೆ. ಹಾಗೆ ನೋಡಿದರೆ ಬೆತ್ತಲೆ ಮೈ ಅಷ್ಟೇನೂ ಸೆಳೆಯುವುದಿಲ್ಲ. ತುಂಬ ಹೊತ್ತು ನೋಡಿದರೆ ಉಸಿರುಗಟ್ಟಿಸುವ ಅನುಭವ, ಒಂಥರ ಹುಷಾರಿಲ್ಲದ ಭಾವವೂ ಆವರಿಸುವ ಸಾಧ್ಯತೆ ಇರುತ್ತದೆ. ಆದರೆ ರೂಢಿಯಾದ ಮೇಲೆ ಏನೂ ಅನಿಸುವುದಿಲ್ಲ... ‘ಏನೇನೂ’! ದಿರಿಸು ಧರಿಸಲು ಮೊದ ಮೊದಲು ಇದೇ ಕಾರಣವಾಗಿತ್ತೋ ಏನೊ ತಿಳಿದಿಲ್ಲ, ಆದರೆ ಸನಾತನ ಕಾಲದಿಂದಲೂ ವಸ್ತ್ರಧಾರಣೆಯ ಪ್ರಮುಖ ಕಾರಣವೇ ಲೈಂಗಿಕ ಚಟುವಟಿಕೆಗಳನ್ನು ಪ್ರಚೋದಿಸುವುದಾಗಿತ್ತು. ಅಂದರೆ, ಸ್ತ್ರೀ- ಪುರುಷರು ಪರಸ್ಪರ ಆಕರ್ಷಣೆಗೊಳಪಡಬೇಕು; ಅಂದಾಗ ಮಾತ್ರ ಅವರ ಸಂತತಿ ವೃದ್ಧಿಯಾಗುವುದು. ಆದ್ದರಿಂದಲೇ ದಿರಿಸಿನ ಮುಖ್ಯ ಉದ್ದೇಶ ಸ್ತ್ರೀ - ಪುರುಷರನ್ನು ಪ್ರತ್ಯೇಕಿಸುವುದು- ಇಬ್ಬರ ದಿರಿಸುಗಳೂ ಸಂಪೂರ್ಣ ಭಿನ್ನ; ಒಬ್ಬರಂತೆ ಇನ್ನೊಬ್ಬರು ಡ್ರೆಸ್ ಮಾಡುವಂತಿಲ್ಲ!! ಕಾಕತಾಳೀಯವೊ ಎಂಬಂತೆ ಹೀಗೆ ವಿಭಿನ್ನ ಶೈಲಿಯಲ್ಲಿ ದಿರಿಸು ಧರಿಸುತ್ತಿದ್ದ ಕಾಲದಲ್ಲಿ ಜನನ ಪ್ರಮಾಣವೂ ಹೆಚ್ಚೇ ಇತ್ತು. ಈಗ ಒಂಥರ ‘ಯೂನಿಸೆಕ್ಸ್’ ಪರಿಕಲ್ಪನೆ. ನೋಡಹೋದರೆ ಬೀದಿಗಳಲ್ಲೆಲ್ಲ ಗಂಡಸರಂಥ ಹೆಂಗಸರು; ಹೆಂಗಸರಂಥ ಗಂಡಸರು (ದಿರಿಸು ಅವರನ್ನು ಪ್ರತ್ಯೇಕಿಸುತ್ತಿಲ್ಲ, ಕೇಶಶೈಲಿ ಸಹ) ಜನನ ಪ್ರಮಾಣ ತುಂಬ ಕಡಿಮೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry