ಶುಕ್ರವಾರ, ಡಿಸೆಂಬರ್ 6, 2019
26 °C

ದಿರಿಸಿನ ದನಿ: ಶಾಲು ಸ್ಟೋಲು...

Published:
Updated:
ದಿರಿಸಿನ ದನಿ: ಶಾಲು ಸ್ಟೋಲು...

 ಪ್ಯಾಂಟು ಟಾಪು ಹಾಕಿದ್ದೀರಿ. ತೋಳಿರುವ ಟಾಪ್ ಆದರೂ ಸಂಜೆಯಾದಂತೆ ಹೆಚ್ಚುವ ಚಳಿಗೆ ಬೆದರಿದ್ದೀರಿ. ಹಾಗೆಂದು ಈಗಲೇ ಕಾಟನ್ ಜರ್ಕಿನ್ ಹಾಕಿ ಹೋದರೆ ತೋರಿಕೆಗೆ ಎನಿಸದೆ? ಹೋಗಲಿ ಕಾರ್ಡ್ರಾಯ್ ಕೋಟ್ ಸ್ಟೈಲಿಶ್ ಲುಕ್ ಕೊಟ್ಟರೂ ಭಾರೀ ಎನಿಸಿಬಿಡುತ್ತದೆ.

 

ಮೇಲಾಗಿ ರಶ್ಶಿರುವ ಬಸ್‌ನಲ್ಲಿ ಉಸಿರುಗಟ್ಟುವಷ್ಟು ಸೆಕೆ! ಎಲ್ಲರೆದುರು ಕೋಟ್ ಕಳಚುವುದೂ ನಾಚಿಕೆಯಿಲ್ಲದ ಜೋರು ಹುಡುಗಿ ಎಂಬ ಸಂಜ್ಞೆ ನೀಡೀತು. ಸ್ಟೋಲ್ ಅಥವಾ ಪುಟ್ಟ ಶಾಲ್ ಬದಲಾಗುವ ಹವಾಮಾನದಲ್ಲೂ ಬದಲಾಗದೇ ಜತೆ ಉಳಿವ ಅತ್ಯುತ್ತಮ ಸ್ನೇಹಿತ. ಸುಮ್ಮನೆ ಹೆಗಲ ಮೇಲೆ ಇಳಿಬಿಟ್ಟರೂ ಸರಿ, ಚಳಿಯಾದಾಗ ಭುಜ ಮುಚ್ಚುವಂತೆ ಹೊದ್ದುಕೊಂಡರೂ ಸರಿ.

ಪ್ರತಿಕ್ರಿಯಿಸಿ (+)