ದಿಲೀಪ್‌ಕುಮಾರ್‌ ಸ್ಥಿರ

7

ದಿಲೀಪ್‌ಕುಮಾರ್‌ ಸ್ಥಿರ

Published:
Updated:

ಮುಂಬೈ (ಪಿಟಿಐ) : ಹೃದಯಾ­ಘಾತಕ್ಕೆ ಒಳಗಾಗಿ ಇಲ್ಲಿಯ ಲೀಲಾವತಿ ಆಸ್ಪತ್ರೆಗೆ ದಾಖ­ಲಾಗಿರುವ ಖ್ಯಾತ ಚಿತ್ರ ನಟ ದಿಲೀಪ್‌­ಕುಮಾರ್‌ (90) ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.ಭಾನುವಾರ ಹಿರಿಯ ನಟನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸ­ಲಾಗಿದ್ದು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗು­ತ್ತಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.ಮಹಾರಾಷ್ಟ್ರದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ನಸೀಮ್‌ ಖಾನ್‌ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry