ದಿಲೀಪ್‌ ಕುಮಾರ್‌ ಚೇತರಿಕೆ

7

ದಿಲೀಪ್‌ ಕುಮಾರ್‌ ಚೇತರಿಕೆ

Published:
Updated:

ಮುಂಬೈ (ಪಿಟಿಐ): ಸಿನಿಮಾ ದಂತಕಥೆಯೆಂದೇ ಕರೆಯುವ 90 ವರ್ಷದ ಪ್ರಖ್ಯಾತ ನಟ ದಿಲೀಪ್‌ ಕುಮಾರ್‌ ಅವರನ್ನು ನಟ ಅಮಿತಾಭ್‌ ಬಚ್ಚನ್‌ ಅವರು ನಗರದ ಲೀಲಾವತಿ ಆಸ್ಪತ್ರೆಯಲ್ಲಿ  ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ದಿಲೀಪ್‌ ಕುಮಾರ್‌ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಳೆದ ವಾರ ಲಘು ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಇವರನ್ನು ಖ್ಯಾತ ಬಾಲಿವುಡ್‌ ನಾಮರು ಭೇಟಿಯಾಗಿದ್ದಾರೆ. ಶಬಾನಾ ಅಜ್ಮಿ, ಫರೀದಾ ಜಲಾಲ್, ಆಶಾ ಪರೇಖ್‌, ರಜಾ ಮುರುದ್‌ ಮತ್ತು ಕೇಂದ್ರ ಸಚಿವ ರಾಜೀವ್‌ ಶುಕ್ಲಾ ಸೇರಿದಂತೆ ಹಲವರು ಗಣ್ಯರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry