ದಿಲ್‌ನಾಜ್‌ಗೆ ಎಎಫ್‌ಪಿ ಪ್ರಶಸ್ತಿ

7

ದಿಲ್‌ನಾಜ್‌ಗೆ ಎಎಫ್‌ಪಿ ಪ್ರಶಸ್ತಿ

Published:
Updated:
ದಿಲ್‌ನಾಜ್‌ಗೆ ಎಎಫ್‌ಪಿ ಪ್ರಶಸ್ತಿ

ಹಾಂಕಾಂಗ್ (ಎಎಫ್‌ಪಿ): ಭಾರತೀಯ ಛಾಯಾಚಿತ್ರಪತ್ರಕರ್ತೆ ಮತ್ತು ವರದಿಗಾರ್ತಿ ದಿಲ್‌ನಾಜ್ ಬೋಗಾ ಅವರು ಎಎಫ್‌ಪಿ ಕಾಟೆ ವೆಬ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಕಾಶ್ಮೀರದಲ್ಲಿ  ಅವರು ಕೈಗೊಂಡ ಕಾರ್ಯಕ್ಕೆ ಈ ಪ್ರಶಸ್ತಿ ಬಂದಿದೆ ಎಂದು ಎಎಫ್‌ಪಿ ಫೌಂಡೇಶನ್ ಪ್ರಕಟಿಸಿದೆ.ಬೋಗಾ (33),  ಶ್ರೀನಗರದಲ್ಲಿ ಒಂದು ವರ್ಷ ವಾಸ್ತವ್ಯ ಮಾಡಿ ಸುದ್ದಿ ಸಂಬಂಧ ಹಾಗೂ ಹಲವಾರು ಅಂತರರಾಷ್ಟ್ರೀಯ ಪ್ರಕಟಣೆ ಮತ್ತು ಅಂತರ್‌ಜಾಲಗಳಿಗೆ ಈ ಪ್ರಾಂತ್ಯದಿಂದ ಕರ್ತವ್ಯ ನಿರ್ವಹಿಸಿದ್ದಾರೆ.ಅಂತರರಾಷ್ಟ್ರೀಯ ಪತ್ರಿಕಾರಂಗದಲ್ಲಿ ಪತ್ರಕರ್ತೆಯರು ನಡೆದ ದಾರಿ ಬಗ್ಗೆ ಬೆಳಕು ಚೆಲ್ಲಿದ  ಏಷ್ಯಾದ ಎಎಫ್‌ಪಿ ಸುದ್ದಿಗಾರನ ಗೌರವಾರ್ಥ  ಕಾಟೆ ವೆಬ್ ಪ್ರಶಸ್ತಿಯನ್ನು  2008ರಲ್ಲಿ ಆರಂಭಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry