ಸೋಮವಾರ, ಮೇ 17, 2021
25 °C

ದಿ. ಚಂದ್ರಶೇಖರ ಪಾಟೀಲ ಪುತ್ಥಳಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದಿ. ಚಂದ್ರಶೇಖರ ಪಾಟೀಲ ರೇವೂರ ಅವರ ತಂದೆಯ ಕಾಲದಿಂದ ಇಲ್ಲಿಯವರೆಗೂ ಶರಣಬಸವೇಶ್ವರ ಮಹಾಸಂಸ್ಥಾನಕ್ಕೆ ಶ್ರದ್ಧಾ, ಭಕ್ತಿಯಿಂದ ನಡೆದುಕೊಂಡಿರುವ ಕುಟುಂಬ. ಸ್ಪಷ್ಟ ವ್ಯಕ್ತಿತ್ವ ಹೊಂದಿದ್ದ ಚಂದ್ರಶೇಖರ ಪಾಟೀಲರು ಸಹಜವಾಗಿ ಎಲ್ಲರೂ ಸೆಳೆಯುತ್ತಿದ್ದರು ಎಂದು ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪಾ ಅಪ್ಪಾ ನೆನಪಿಸಿಕೊಂಡರು.ಅಫಜಲಪುರ ತಾಲ್ಲೂಕಿನ ರೇವೂರ ಗ್ರಾಮದಲ್ಲಿ ದಿ. ಚಂದ್ರಶೇಖರ ಪಾಟೀಲ ಅವರ ಪುತ್ಥಳಿ ಅನಾವರಣಗೊಳಿಸಿದ ನಂತರ ಎರಡನೇ ಪುಣ್ಯಸ್ಮರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಅನ್ಯಾಯದ ವಿರುದ್ಧ ಸಿಡಿದೇಳುವುದು.

 

ಒಳ್ಳೆಯದನ್ನು ಬೆಂಬಲಿಸುತ್ತಿದ್ದುದರ ಪರಿಣಾಮವಾಗಿ ಜನಮಾನಸದಲ್ಲಿ ಸದಾ ಉಳಿದುಕೊಳ್ಳುತ್ತಿದ್ದರು. ನಾಯಕತ್ವ ಗುಣಗಳು ಚಂದ್ರಶೇಖರ ಪಾಟೀಲರಲ್ಲಿ ದಟ್ಟವಾಗಿದ್ದರಿಂದಲೆ ಗುಲ್ಬರ್ಗದಲ್ಲಿ ಯಾವುದೇ ಕೆಟ್ಟಶಕ್ತಿಗಳ ಆಟ ನಡೆಯುತ್ತಿರಲಿಲ್ಲ. ಅವರು ಜೀವಂತವಾಗಿದ್ದರೆ ನಕ್ಸಲೀಯರು ಗುಲ್ಬರ್ಗ ಜಿಲ್ಲೆಗೆ ಕಾಲಿಡಲು ಬಿಡುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.ರೇವೂರ ಗ್ರಾಮದಲ್ಲಿರುವ ರೇವೂರಗೌಡರ ತೋಟದ ಮೂಲಕವೆ ಎಲ್ಲರೂ ಬೆಳೆದು ದೊಡ್ಡವರಾಗಿದ್ದಾರೆ. ಚಂದ್ರಶೇಖರ ಪಾಟೀಲ ಅವರ ಸುಪುತ್ರರಿಬ್ಬರು ಈ ತೋಟದ ಮೂಲಕವೆ ಅಭಿವೃದ್ಧಿ ಸಾಧಿಸುವಂತಾಗಲಿ; ತಂದೆಯಂತೆಯೆ ಸಮಾಜಕ್ಕೆ ಅನುಕೂಲಕರವಾಗುವ ಕೆಲಸಗಳನ್ನು ಮಾಡಿಕೊಡುವಂತಾಗಲಿ ಎಂದು ಶುಭ ಹಾರೈಸಿದರು.ಗೌಡಗಾಂವ ಹಿರೇಮಠದ ಡಾ. ಜಯಸಿದ್ದೇಶ್ವರ ಶಿವಾಚಾರ್ಯ ಮಾತನಾಡಿ, ದಿ. ಚಂದ್ರಶೇಖರ ಪಾಟೀಲರು ಜನಮಾನಸದಲ್ಲಿ ಸಾಕಷ್ಟು ಬೇರೂರಿದ್ದಾರೆ. `ಸತ್ತರೂ ಕೀರ್ತಿ ಉಳಿಯಬೇಕು~ ಎಂದು ದೊಡ್ಡವರು ಹೇಳುವ ರೀತಿಯಲ್ಲಿ ಚಂದ್ರಶೇಖರ ಪಾಟೀಲರು ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಅವರ ಸುಪುತ್ರರು ಸಹ ಅದೇ ಮಾರ್ಗದಲ್ಲಿ ಬೆಳೆದು ಅಭಿವೃದ್ಧಿ ಸಾಧಿಸುವಂತಾಗಲಿ ಎಂದು ಆಶೀರ್ವದಿಸಿದರು.ಶಹಾಬಜಾರ ಸುಲಫಲ ಮಠದ ಮಹಾಂತ ಶಿವಾಚಾರ್ಯ ಮಾತನಾಡಿ, `ದಿ. ಚಂದ್ರಶೇಖರ್ ಪಾಟೀಲ ರೇವೂರ ಅವರ ಬಗ್ಗೆ ಮಾತನಾಡಿದಷ್ಟು ಶಬ್ದಗಳು ಸಣ್ಣದಾಗುತ್ತವೆ. ಅವರು ಮಾಡಿದ ಕಾರ್ಯಗಳು ದೊಡ್ಡದಾಗುತ್ತವೆ. ಅವರು ಮನಸ್ಸು ಮಾಡಿದೆಲ್ಲವನ್ನು ಸಾಧಿಸುವ ಛಾತಿ ಹೊಂದಿದ್ದರು~ ಎಂದರು.ಬೀದರ್ ಚಿದಂಬರಾಶ್ರಮದ ಶಿವಕುಮಾರ ಮಹಾಸ್ವಾಮಿ ಮಾತನಾಡಿ, `ಮಾನವ ಜನ್ಮ ದೊಡ್ಡದು. ಜೀವನ ಮರಣದ ನಡುವೆ ಸುಂದರ ಬದುಕು ಕಟ್ಟಿಕೊಳ್ಳಬೇಕು. ಜೀವ ಉಳಿಸಿಕೊಳ್ಳಲು ಜೀವಿಸುವುದು; ಜೀವಿಸಲು ಆಹಾರ ಸೇವಿಸುವುದಷ್ಟೆ ಮಾಡಿದರೆ, ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದಿಲ್ಲ. ಸತ್ತ ಮೇಲೂ ಬದುಕಬೇಕು. ದಿ. ಚಂದ್ರಶೇಖರ ಪಾಟೀಲರು ಜನಮಾನಸದಿಂದ ಇನ್ನೂ ಮರೆಯಾಗಿಲ್ಲ. ಅವರ ಕೀರ್ತಿ ಇನ್ನೂ ಉಳಿದುಕೊಂಡಿದೆ. ಇದು ಜೀವಂತ ಬದುಕಿನ ಸಂಕೇತ~ ಎಂದರು.ಹಿಂಚಗೇರಾ ಶಿವಯೋಗಾಶ್ರಮ ಮಠದ ಶಿವರಾಜೇಂದ್ರ ಮಹಾಸ್ವಾಮಿ, ರೇವೂರ ಬ್ರಹ್ಮಲಿಂಗೇಶ್ವರ ಮಠದ ಶ್ರೀಕಂಠ ಶಿವಾಚಾರ್ಯ, ಬಡದಾಳ ತೇರಿನಮಠದ ಚನ್ನಮಲ್ಲ ಶಿವಾಚಾರ್ಯ, ಶಿವಲಿಂಗೇಶ್ವರ ಮಠದ ಗುರುನಾಥ ಮಹಾಶಿವಯೋಗಿ, ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯ, ಬಬಲಾದ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ, ಬಸವ ಯೋಗಾಶ್ರಮದ ಸಿದ್ಧರಾಮ ಶರಣರು, ಗದ್ದುಗೆ ಮಠದ ರೇವಣಸಿದ್ಧ ಮಹಾಶಿವಯೋಗಿ, ಶಿವಾನಂದ ಶಿವಾಚಾರ್ಯ, ಚೌದಾಪುರಿ ಮಠದ ರಾಜಶೇಖರ ಶಿವಾಚಾರ್ಯ, ಅಭಿನವ ರಾಚೋಟೆಶ್ವರ ಶಿವಾಚಾರ್ಯ, ಗುಂಡುಮುತ್ತ್ಯಾ, ಮಹಾಪೌರ ಸೋಮಶೇಖರ ಮೇಲಿನಮನಿ, ಶಾಸಕಿ ಅರುಣಾ ಸಿ. ಪಾಟೀಲ, ದತ್ತಾತ್ರೇಯ ಸಿ. ಪಾಟೀಲ, ಜೆಡಿಎಸ್ ನಾಯಕ ದೇವೇಗೌಡ ತೆಲ್ಲೂರ, ಬಿ.ಜಿ. ಪಾಟೀಲ, ಡಿ.ವಿ. ಪಾಟೀಲ, ಮಾರುತಿ ಕನ್ನಾ, ಲಿಂಗರಾಜಪ್ಪ, ಬಾಂಬೆಸೇಠ, ವಿಠ್ಠಲ ದೊಡ್ಡಮನಿ ಮತ್ತಿತರರು ಇದ್ದರು. ಮಲ್ಲಿಕಾರ್ಜುನ ಶಾಸ್ತ್ರೀ ಐನಾಪುರ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.