ಸೋಮವಾರ, ಮೇ 16, 2022
29 °C

ದಿ ಯೆಲ್ಲೊ ಸೈಕಲ್ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಹೀಗೆ ಬದುಕಿನ ಸುಂದರ ದಿನಗಳು ಹತ್ತಿರವಾದಂತೆಲ್ಲ ಕುತೂಹಲ ಹೆಚ್ಚುತ್ತದೆ. ಆಪ್ತರು ವಿಶೇಷ ಉಡುಗೊರೆ ಕೊಟ್ಟು ಖುಷಿಯಲ್ಲಿ ಕೊರಳ ಸೆರೆ ಉಬ್ಬುವಂತೆ ಮಾಡುತ್ತಾರೆ ಎಂದು ಮನಸ್ಸು ಮತ್ತೆ ಮತ್ತೆ ಕನಸು ಕಾಣಲು ಪ್ರಾರಂಭಿಸುತ್ತದೆ.ಸಿನಿಮಾದಲ್ಲೋ ಧಾರಾವಾಹಿಯಲ್ಲೂ ಕಾಣಿಸುವ ವಿಪರೀತ ಎಕ್ಸೈಟ್‌ಮೆಂಟ್ ಸನ್ನಿವೇಶದಂತೆ ನಾನೂ ಒಮ್ಮೆ  ಖುಷಿಯಲ್ಲಿ ಜಿಗಿದಾಡಬೇಕು ಎಂದು ಮನಸ್ಸು ಹಾತೊರೆಯುತ್ತದೆ.ಈ ಎಲ್ಲಾ ಆಸೆ ಆಕಾಂಕ್ಷೆಗಳು ಬರಿಯ ಹಗಲುಗನಸು ಎಂದು ಚಿಂತಿಸಬೇಕಾಗಿಲ್ಲ. ನಿಮ್ಮ ಸಂಗಾತಿಯ ಮನಸಿನ ಮಾತು ಕೇಳಿ ಅವರನ್ನು ಖುಷಿಯ ಕಡಲಲ್ಲಿ ತೇಲಿಸಬಹುದು. ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಾಗಿಸಬಹುದು. ವೈನ್, ರುಚಿಯಾದ ತಿಂಡಿ ಹೀಗೆ ಹತ್ತು ಹಲವು ತರಹದ ಉಡುಗೊರೆ ನೀಡಿ ಉಲ್ಲಾಸಗೊಳಿಸಬಹುದು.ಈ ಎಲ್ಲಾ ಸಂದರ್ಭ ನನಸಾಗಿಸಿಕೊಳ್ಳಲು `ದಿ ಯೆಲ್ಲೊ ಸೈಕಲ್~ ಎಂಬ ವಿನೂತನ ಸಂಸ್ಥೆಯನ್ನು 2011ರ ಅಕ್ಟೋಬರ್‌ನಲ್ಲಿ ಸ್ಥಾಪಿಸಿ ವಿಧವಿಧವಾದ ಉಡುಗೊರೆ ನೀಡುವ ಸದವಕಾಶವನ್ನು ಬೆಂಗಳೂರಿಗರಿಗಾಗಿ ಪರಿಚಯಿಸಿದ್ದಾರೆ ನೇಹಾ.ಎಪ್ರೊಡೈಸಾಕ್ ಇವನಿಂಗ್, ವೈನ್ ಟೇಸ್ಟಿಂಗ್ ಅಂಡ್ ಪಿಕ್‌ನಿಕ್ ಇನ್ ದ ವೈನ್ ಯಾರ್ಡ್ಸ್, ಫ್ಲೈ ಮೈಕ್ರೊಲೈಟ್ ಪ್ಲೇನ್ ಸ್ಟೈಲ್, ಅ ಡಾನ್ಸ್ ಫೊರ್ಮ್ ಇನ್ 8 ಲೆಸ್ಸೆನ್ಸ್, ಹೆಲಿಕಾಪ್ಟರ್ ರೈಡ್ ಓವರ್ ದಿ ಸಿಟಿ ಸ್ಕೈ ಲೈನ್, ಮಾಸ್ಟರ್‌ಶೆಫ್ ಇನ್ ಯುವರ್ ಕಿಚನ್, ದಿ ಗ್ರೇಟ್ ಇಂಡಿಯನ್ ಬಜಾರ್ ಎಕ್ಸ್‌ಪೀರಿಯೆನ್ಸ್, ಫ್ಯಾಶನ್ ಅಂಡ್ ಸ್ಟೈಲ್ ಮೇಕ್ ಓವರ್, ಪ್ರೈವೇಟ್ ಡಾನ್ಸ್ ಲೆಸ್ಸೆನ್ಸ್ ವಿತ್ ಸೆಲೆಬ್ರಿಟಿ ಕೊರಿಯೊಗ್ರಾಫರ್ ಹೀಗೆ ಸುಮಾರು 16 ವಿವಿಧ ಬಗೆಯ ಉಡುಗೊರೆಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಖುಷಿ ಪಡಿಸಬಹುದು.ಕೇವಲ 2,950 ರೂಪಾಯಿಯಿಂದ 22,500 ರೂಪಾಯಿವರೆಗಿನ ಉಡುಗೊರೆಯೂ ಇಲ್ಲಿ ಲಭ್ಯವಿದ್ದು, ಫೋನ್ ಮಾಡಿ ಯಾವ ದಿನಾಂಕ, ಯಾವ ಉಡುಗೊರೆಯನ್ನು ನೀವು ಖರೀದಿಸಲಿದ್ದೀರಿ ಮುಂತಾದ ವಿವರಣೆ ನೀಡಿದರೆ ಸಾಕು. ಇದರ ಬಳಕೆ ಅವಧಿ (ವ್ಯಾಲಿಡಿಟಿ) ಆರು ತಿಂಗಳು. ಉಳಿದೆಲ್ಲ ಜವಾಬ್ದಾರಿಯನ್ನು ಖುದ್ದು ನೇಹಾ ಅವರೇ ನೋಡಿಕೊಳ್ಳಲಿದ್ದಾರೆ.`ಪ್ರತಿ ಉಡುಗೊರೆಯೂ ತನ್ನದೇ ಆದ ವೈಶಿಷ್ಟ್ಯ ಹೊಂದಿವೆ. ವಿಶೇಷ ದಿನದ ಸಂಭ್ರಮಕ್ಕೆ ಆಗಾಗ ನೀಡಲಾಗುವ ಚಾಕೊಲೇಟ್, ವೈನ್, ರೊಮ್ಯಾಂಟಿಕ್ ಡ್ರೈವ್, ಡಾನ್ಸ್ ಇವೆಲ್ಲಾ ನಿಮ್ಮನ್ನು ಸಂಭ್ರಮದ ಹೊಸ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ~ ಎನ್ನುವುದು ಅವರ ಭರವಸೆ.ವಿಭಿನ್ನತೆ ಸಾರುವ ಈ ಎಲ್ಲವುಗಳಲ್ಲಿ ವಿಶೇಷವಾಗಿ ಕಾಣುವುದು ಫ್ಲೈ ಎ ಮೈಕ್ರೊಲೈಟ್ ಪ್ಲೇನ್ ಇನ್ ಸ್ಟೈಲ್. ಬೆಂಜ್ ಇಲ್ಲವೆ ಬಿಎಂಡಬ್ಲ್ಯು ಕಾರಿನ ಮೂಲಕ ನಿಮ್ಮನ್ನು ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುವುದು. ನುರಿತ ಪೈಲೆಟ್ ಒಬ್ಬರು ನಿಮ್ಮ ಬಾನಂಗಳದ ಹಾರಾಟಕ್ಕೆ ಸಾಥ್ ಕೊಡಲಿದ್ದಾರೆ. ಚಿಕ್ಕಂದಿನಲ್ಲಿ ಕಂಡ ಪೈಲೆಟ್ ಆಗುವ ಆಸೆಯನ್ನು ಈಡೇರಿಸಿಕೊಳ್ಳಲು ಇದು ಉತ್ತಮ ಸಮಯ.ನೀವೇ ವಿಮಾನವನ್ನು ನಿಯಂತ್ರಿಸಬಹುದು. ನಿಮ್ಮ ಸಂತಸದ ಈ ಎಲ್ಲಾ ಸನ್ನಿವೇಶಗಳನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯಲಾಗುತ್ತದೆ. ನಂತರ ವೈನ್ ಇಲ್ಲವೇ ಶಾಂಪೇನ್ ನಿಮ್ಮನ್ನು ಸ್ವಾಗತಿಸಲಿದೆ. ದಿನದ ಪ್ರತಿ ಕ್ಷಣವನ್ನು ವಿನೂತನವಾಗಿ ಕಳೆಯಬಹುದು. ಈ ಉಡುಗೊರೆ ಬೆಲೆ 19,750 ರೂಪಾಯಿ.`ತಾಯಿ ದೆಹಲಿಯಲ್ಲಿ. ವಿದ್ಯಾಭ್ಯಾಸಕ್ಕಾಗಿ ಮಗ ಬೆಂಗಳೂರಿನಲ್ಲಿ. ಮಗ ಜೊತೆಯಲ್ಲಿದ್ದಷ್ಟೂ ವರ್ಷ ಅಮ್ಮ ಬಿಡದೆ ಮಗನ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು.  ಆದರೆ ಈ ವರ್ಷ ಮಗನ ಹುಟ್ಟುಹಬ್ಬ ಹೇಗೆ ಆಚರಿಸಬೇಕು ಎಂದು ಚಿಂತಿಸಿದ ಅಮ್ಮನ ನೆರವಾದೆವು; ಮಗನಿಗಿಷ್ಟದ ಉಡುಗೊರೆ ನೀಡುವಂತೆ ಒಬ್ಬ ಅಮ್ಮ ಫೋನಾಯಿಸಿದರು.ಬ್ಯಾಂಕ್ ಖಾತೆಗೆ ದುಡ್ಡು ಹಾಕಿದರು. ಉಳಿದೆಲ್ಲ ವ್ಯವಸ್ಥೆಯನ್ನು ನಾವೇ ನಿರ್ವಹಿಸಿದೆವು. ಅಮ್ಮ ನೀಡಿದ ಈ ಅನಿರೀಕ್ಷಿತ ಕೊಡುಗೆ ಕಂಡು ಕುಣಿದಾಡಿದ ಮಗನ ಸಂತೋಷ ಕಂಡಾಗ ನನ್ನ ಶ್ರಮ ಸಾರ್ಥಕ ಎನಿಸಿತು. ಬೆಂಗಳೂರಿನಲ್ಲಿರುವ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುತ್ತಾರೆ. ಒಂದು ಫೋನ್ ಕರೆಯಲ್ಲಿ ಆರ್ಡರ್ ನಿಮ್ಮದು. ವ್ಯವಸ್ಥೆ ನಮ್ಮದು ಎನ್ನುತ್ತಾರೆ ನೇಹಾ.ಹೆಚ್ಚಿನ ವಿವರಕ್ಕಾಗಿ www.theyellowcycle.com ವೆಬ್‌ಸೈಟ್‌ನ್ನು ನೋಡಬಹುದು. ಸಂಪರ್ಕಕ್ಕೆ: 99017 44003.

 

ಒಂದರ ತೊಂದರೆ ಇನ್ನೊಂದಕ್ಕೆ ಮುನ್ನುಡಿ...

`ಮದುವೆಯಾದ ಮೇಲೆ ಬೆಂಗಳೂರಿನಲ್ಲೇ ಸೆಟ್ಲ್ ಆದೆವು. ಮದುವೆಯ ಮೊದಲ ವರ್ಷ ಪತಿಗೆ ಮರೆಯಲಾರದ ಸುಂದರ ಉಡುಗೊರೆ ನೀಡಬೇಕು ಎಂದು ಬೆಂಗಳೂರೆಲ್ಲಾ ತಡಕಾಡಿದೆ. ವಿಶೇಷ ಎಂಬಂಥ ಅದ್ಯಾವ ಉಡುಗೊರೆಯೂ ನನ್ನ ಕಣ್ಣಿಗೆ ಬೀಳಲಿಲ್ಲ.ನನ್ನಂತೆ ಪ್ರೀತಿ ಪಾತ್ರರಿಗೆ ಸುಂದರ ಗಿಫ್ಟ್ ನೀಡಲು ಕಾತರವಿರಬಹುದು ಎಂಬ ಚಿಂತನೆಯೇ `ದಿ ಯೆಲ್ಲೊ ಸೈಕಲ್~ ಸ್ಥಾಪನೆಗೆ ಕಾರಣ. ಈ ಅವಕಾಶ ಬಳಸಿಕೊಳ್ಳುವ ನನ್ನ ಗ್ರಾಹಕರು ಅತ್ಯಂತ ಸಂತೋಷ ಪಡುತ್ತಾರೆ.

 

ಚಿಕ್ಕಂದಿನಲ್ಲಿ ಯಾವುದರ  ಚಿಂತೆ ಇ್ಲ್ಲಲದೆ ನಲಿದಾಡುವಂತೆ ಅವರೂ ನಲಿದಾಡುತ್ತಾರೆ. ಸಂತೋಷದ ಗುರುತು ಹಳದಿ, ಸ್ವಾತಂತ್ರ್ಯದ ಕೊಂಡಿ ಸೈಕಲ್. ಹೀಗಾಗಿ ನನ್ನ ಸಂಸ್ಥೆಗೆ `ದಿ ಯೆಲ್ಲೊ ಸೈಕಲ್~ ಎಂದು ಪ್ರೀತಿಯಿಂದ ಹೆಸರಿಟ್ಟಿದ್ದೇನೆ. 

-ನೇಹಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.