ದೀನ್‌ದಯಾಳ ಆದರ್ಶ ಎಲ್ಲರಿಗೂ ಮಾದರಿ

7

ದೀನ್‌ದಯಾಳ ಆದರ್ಶ ಎಲ್ಲರಿಗೂ ಮಾದರಿ

Published:
Updated:

ಕಾರವಾರ: ಪಂಡಿತ ದೀನ್‌ದಯಾಳ ಉಪಧ್ಯಾಯ ಅವರ ಜೀವನದ ಧ್ಯೇಯೋದ್ದೇಶಗಳು ಇಂದಿಗೂ ಪ್ರಸ್ತುತ. ಅವರು ಹಾಕಿಕೊಟ್ಟ ಮಾರ್ಗ ದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಜನಪ್ರೀಯ ಯೋಜನೆಗಳನ್ನು ತರಲು ಸಾಧ್ಯವಾಗಿದೆ ಎಂದು ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.ನಗರದ ಮಸೀದಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಪಾಧ್ಯಯರು ಹಾಕಿಕೊಟ್ಟ ಮಾರ್ಗ ದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ ಕಾರವಾರಕರ್ ಮಾತನಾಡಿ, ಉಪಧ್ಯಾಯರು ಪಕ್ಷದ ಸಂಘಟನೆ ಗಾಗಿ ತಮ್ಮನ್ನು ತಾವು ಸಮರ್ಪಿಸಿ ಕೊಂಡ ಬಗೆಯನ್ನು ವಿವರಿಸಿದರು. ಜನಸಂಘ ಬೆಳವಣಿಗೆಯ ಬಗ್ಗೆ ಹೆದ ರಿದ ಅಂದಿನ ಆಡಳಿತ ಪಕ್ಷ ಅವರ ಸಾವಿನ ವಿಷಯದಲ್ಲಿ ಸಂಶಯಾಸ್ಪದ ವಾಗಿ ನಡೆದುಕೊಂಡಿತು ಎಂದರು.ನಗರ ಘಟಕದ ಅಧ್ಯಕ್ಷ ರಾಜೇಶ ನಾಯಕ, ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ, ಪಕ್ಷದ ಹಿರಿಯ ಮುಖಂಡ ಎಸ್.ಆರ್.ಪಿಕಳೆ, ಅಂಕೋಲಾ ಪಟ್ಟಣ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾರ್ವೇಕರ, ಕಾರ್ಯದರ್ಶಿ ರತನ ದುರ್ಗೇಕರ, ನಾಗರಾಜ್ ಜೋಶಿ, ಆರ್.ಜಿ. ನಾಯಕ, ಆರ್.ಎನ್.ನಾಯಕ,  ಯುವಮೋರ್ಚಾ ಅಧ್ಯಕ್ಷ ನವೀನ ಅಂಕೋಲೆಕರ ಹಾಜರಿದ್ದರು. ಜಿಲ್ಲಾ ಕೊಶಾಧ್ಯಕ್ಷ ಜಗದೀಶ ಬೀರಕೋಡಿಕರ ಪ್ರಾಸ್ತಾವಿಕ ಮಾತನಾಡಿದರು. ಗಜಾ ಸುರಂಗೇಕರ ಕಾರ್ಯಕ್ರವ ನಿರೂಪಿಸಿದರು. ಕ್ಷೇತ್ರ ಕಾರ್ಯದರ್ಶಿ ಸಂಜಯ ನಾಯಕ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry