ಮಂಗಳವಾರ, ನವೆಂಬರ್ 12, 2019
20 °C
ಹಾಕಿ: ಐಒಸಿಎಲ್‌ಗೆ ಸುಲಭ ಗೆಲುವು

ದೀಪಕ್ ಠಾಕೂರ್ ಮಿಂಚಿನ ಆಟ

Published:
Updated:

ಬೆಂಗಳೂರು: ದೀಪರ್ ಠಾಕೂರ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ಐಒಸಿಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಓಜೋನ್‌ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಐಒಸಿಎಲ್ 3-0 ಗೋಲುಗಳಿಂದ ಬಿಪಿಸಿಎಲ್ ತಂಡವನ್ನು ಮಣಿಸಿತು.

ದೀದಾರ್ ಸಿಂಗ್ 17ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಐಒಸಿಎಲ್ ವಿರಾಮದ ವೇಳೆಗೆ 1-0 ರಲ್ಲಿ ಮುನ್ನಡೆ ಸಾಧಿಸಿತ್ತು. ದೀಪಕ್ ಠಾಕೂರ್ ಎರಡನೇ ಅವಧಿಯಲ್ಲಿ ಎರಡು ಗೋಲುಗಳನ್ನು ಗಳಿಸಿ (63 ಮತ್ತು 66ನೇ ನಿ.) ತಂಡದ ಗೆಲುವನ್ನು ಖಚಿತಪಡಿಸಿಕೊಂಡರು.ಫೋರ್ಟಿಸ್ ಮತ್ತು ನಾಮಧಾರಿ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನ ಡ್ರಾದಲ್ಲಿ ಅಂತ್ಯಕಂಡಿತು. ಎದುರಾಳಿ ತಂಡ ನೀಡಿದ `ಉಡುಗೊರೆ' ಗೋಲಿನ ನೆರವಿನಿಂದ ನಾಮಧಾರಿ ತಂಡಕ್ಕೆ 45ನೇ ನಿಮಿಷದಲ್ಲಿ ಮುನ್ನಡೆ ದೊರೆಯಿತು. ಫೋರ್ಟಿಸ್ ತಂಡದ ಬಿ. ಹೊರೊ 48ನೇ ನಿಮಿಷದಲ್ಲಿ ಸಮಬಲದ ಗೋಲು ತಂದಿತ್ತರು.

ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಎಎಸ್‌ಸಿ- ಏರ್ ಇಂಡಿಯಾ ಮತ್ತು ಪಿಎನ್‌ಬಿ- ಐಒಸಿಎಲ್ ತಂಡಗಳು ಎದುರಾಗಲಿವೆ.

ಪ್ರತಿಕ್ರಿಯಿಸಿ (+)