ದೀಪದ ಹಬ್ಬ...

7

ದೀಪದ ಹಬ್ಬ...

Published:
Updated:

ದೀಪವಾಗುವ ದೀಪ ಬೆಳಗುವ

ದೀಪ ಗೋಪುರವಾಗುವಾ

ಆತ್ಮ ದೀಪಕೆ ದೇವ ದೀಪಕೆ

ಪ್ರೇಮ ದೀಪವ ಬೆಳಗುವಾ

ಬೆಳಕು ಸುಂದರ ಬದುಕು ಸುಂದರ

ಬಾಳು ಬಂಧುರವಾಗಲಿ

ಹಸಿರು ಚಿಮ್ಮಲಿ ಹೂವು ಹೊಮ್ಮಲಿ

ಪ್ರೀತಿ ಪ್ರೇಮವು ಅರಳಲಿ

ಜಡದ ಮಾನಸ ಜ್ಯೋತಿಯಾಗಲಿ

ಸುಪ್ರಮಾನಸ ಚಿಮ್ಮಲಿ

ಕಠಿಣ ಕಲ್ಲು ಲಿಂಗವಾಗಲಿ

ಮುಳ್ಳು ಮಲ್ಲಿಗೆಯಾಗಲಿ

ನಾವು ದೀಪಾ

ನೀವು ದೀಪಾ

ದೀಪ ಹಬ್ಬವು

ಬಾಳಲಿ

ಕಡಲು

ಕಾಡು

ನಾಡ ಗುಡಿಯಲಿ

ನುಡಿಯ ದೀಪವು

ಬೆಳಗಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry