ಗುರುವಾರ , ಏಪ್ರಿಲ್ 22, 2021
22 °C

ದೀಪದ ಹಬ್ಬಕ್ಕೆ ಪಟಾಕಿ ಬೇಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟಾಕಿ ಹಚ್ಚದೇ ದೀಪಾವಳಿ ಆಚರಿಸಿ ಎನ್ನುತ್ತಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. ಇದಕ್ಕೆ ಗ್ಲೋಬಲ್ ಆರ್ಟ್ ಮತ್ತು ಸಿಪ್ ಅಕಾಡೆಮಿ ಬೆಂಬಲ ಸೂಚಿಸಿದೆ.

 

ಶನಿವಾರ (ನ.3) ಸರ್ಜಾಪುರ ರಸ್ತೆಯಲ್ಲಿರುವ ಓಕ್ರಿಡ್ಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿರುವ ಈ ಆಂದೋಲನದಲ್ಲಿ 5 ರಿಂದ 15 ವರ್ಷ ವಯಸ್ಸಿನ ಸುಮಾರು 500ಕ್ಕೂ ಅಧಿಕ ಮಕ್ಕಳು ಭಾಗವಹಿಸಲಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಚಿತ್ರರಚನೆ ಸ್ಪರ್ಧೆ ಜೊತೆಗೆ ಗೋ ಗ್ರೀನ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಮಟ್ಟವು ಶೇ 200 ಪಟ್ಟು ಹೆಚ್ಚುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಹಾಗೂ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಹಾನಿಯುಂಟು ಮಾಡುವ ಪಟಾಕಿಗಳ ಬಳಕೆ ಬೇಡ ಎಂಬುದು ಆಂದೋಲನದ ಮುಖ್ಯ ಉದ್ದೇಶ.

 

ಹಾಗಾಗಿ ಆಂದೋಲನದಲ್ಲಿ ಭಾಗವಹಿಸುವ ಮಕ್ಕಳು ಪಟಾಕಿಗಳು ಏಕೆ ಅಪಾಯಕಾರಿ, ಅದರಿಂದ ಉಂಟಾಗುವ ಪರಿಸರ ಮಾಲಿನ್ಯ ಇವೆಲ್ಲವುಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.  ಈ ವೇಳೆ ಚಿತ್ರಕಲಾ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಅವರು ಪಟಾಕಿಗಳನ್ನು ಬಳಸದೆ ದೀಪಾವಳಿ  ಹಬ್ಬವನ್ನು  ಹೇಗೆ ಉತ್ತಮವಾಗಿ ಆಚರಿಸಬಹುದು ಎಂದು ತಮ್ಮದೇ ಸಂದೇಶಗಳನ್ನು ತಿಳಿಸುತ್ತಾರೆ.ಪಟಾಕಿಯಿಂದಾಗುವ ಹಾನಿ, ನಗರದಲ್ಲಿರುವ ಕಸದ ಸಮಸ್ಯೆಗೆ ಮುಕ್ತಿ ಕುರಿತಂತೆ ಮಕ್ಕಳು ಚಿತ್ರ ರಚನೆ ಮಾಡಲಿದ್ದಾರೆ. ಉತ್ತಮ ಚಿತ್ರ ರಚನೆಯ ಜೊತೆ ಉತ್ತಮ ಸಂದೇಶ ಸಾರುವ ಚಿತ್ರಗಳಿಗೆ ಬಹುಮಾನ ನೀಡಿ ಸಲಾಗುತ್ತದೆ ಎನ್ನುತ್ತಾರೆ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.