ಶುಕ್ರವಾರ, ಏಪ್ರಿಲ್ 16, 2021
21 °C

ದೀಪಾವಳಿ ಪರಿಸರಕ್ಕೂ ಹಬ್ಬವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಅಚರಿಸುವ ಜೊತೆಗೆ ಪರಿಸರಕ್ಕೆ ಹಾನಿಯಾಗದಂತಹ ಪಟಾಕಿಗಳನ್ನು ಬಳಸುವ ಮೂಲಕ ಯಾದಗಿರಿಯನ್ನು ಹಸಿರು ಜಿಲ್ಲೆಯಾಗಿ ರೂಪಿಸಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಮನವಿ ಮಾಡಿದ್ದಾರೆ.ಬೆಳಕಿನ ಹಬ್ಬ ದೀಪಾವಳಿಗೆ ಶುಭಾಶಯ ಕೋರಿರುವ ಜಿಲ್ಲಾಧಿಕಾರಿಗಳು, ಈ ಹಬ್ಬ ಎಲ್ಲ ಜನರ ಬಾಳಲ್ಲಿ ಬೆಳಕು ತರಲಿ. ಸುಖ, ಸಮೃದ್ಧಿ, ಶಾಂತಿ ಹಾಗೂ ನೆಮ್ಮದಿ ತರಲಿ. ಎಲ್ಲ ಧರ್ಮಿಯರು ಸಂತೋಷದಿಂದ, ಪರಸ್ಪರ ಸಹಕಾರದೊಂದಿಗೆ ಈ ಹಬ್ಬ ಆಚರಿಸಬೇಕು ಎಂದು ತಿಳಿಸಿದ್ದಾರೆ.ಹಬ್ಬದ ಅಂಗವಾಗಿ ಪಟಾಕಿ ಹಾರಿಸುವ ಸಂದರ್ಭದಲ್ಲಿ ಎಲ್ಲರೂ ಜಾಗೃತಿ ವಹಿಸಬೇಕು. ಅಪಾಯಕಾರಿ ಪಟಾಕಿಗಳನ್ನು ಬಳಸದೇ ಪರಿಸರಕ್ಕೆ ಹಾನಿಯಾಗದ ಹಾಗೆ ಈ ಹಬ್ಬ ಆಚರಿಸಬೇಕು ಎಂದು ಸಲಹೆ ಮಾಡಿದ್ದಾರೆ.ಬಡವರು ಸಹ ಆರ್ಥಿಕವಾಗಿ ಸಬಲರಾಗಿ ತಮ್ಮ ಬಾಳನ್ನು ಬೆಳಗಿಸಿಕೊಳ್ಳಲು ಸರ್ಕಾರದಿಂದ ಕೊಡ ಮಾಡುವ ಯೋಜನೆಗಳ ಲಾಭ ಪಡೆಯಬೇಕು. ಪ್ರಜ್ಞಾವಂತ ನಾಗರಿಕರು ಸಹ ಇಂತಹ ಯೋಜನೆಗಳ ಬಗ್ಗೆ ಬಡ ಜನರಿಗೆ ತಿಳಿಹೇಳುವ ಕಾರ್ಯವನ್ನು ಮಾಡುವಂತೆ ಮನವಿ ಮಾಡಿದ್ದಾರೆ.ಮಕ್ಕಳಿಗೆ ಸಲಹೆ:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಕ್ಕಳು ಅಪಾಯಕಾರಿ ಪಟಾಕಿಗಳ ಬಗ್ಗೆ ಎಚ್ಚರ ವಹಿಸಬೇಕು. ಈ ಹಬ್ಬ ಸಂತೋಷದಿಂದ ಆಚರಿಸಬೇಕು. ಅಪಾಯಕಾರಿ ಪಟಾಕಿಗಳಿಗಾಗಿ ಹಣ ದುಂದು ವೆಚ್ಚ ಆಗದಂತೆ ನೋಡಿಕೊಂಡು ಈ ಹಣವನ್ನು ಮಹತ್ವದ ವಸ್ತುಗಳ ಅಥವಾ ಅಗತ್ಯವುಳ್ಳ ಪರಿಕರಗಳ ಖರೀದಿಗೆ ವೆಚ್ಚ ಮಾಡುವ ಕುರಿತಂತೆ ಸ್ವಯಂ ಸ್ಫೂರ್ತಿಯಿಂದ ಪಾಲಕರಲ್ಲಿ ಮನವರಿಕೆ ಮಾಡುವ ಕಾರ್ಯವನ್ನು ಮಾಡುವಂತೆ ಮಕ್ಕಳಿಗೆ ಸಲಹೆ ಮಾಡಿದ್ದಾರೆ.ಪರಿಸರ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವ ದಿಸೆಯಲ್ಲಿ ಪ್ಲಾಸ್ಟಿಕ್ ದುರ್ಬಳಕೆ ಮತ್ತು ಪ್ಲಾಸ್ಟಿಕ್ ನಿಷೇಧ ಹಿಂದುಳಿದ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಹಾಗೂ ಮಕ್ಕಳೊಂದಿಗೆ ವಿವಿಧ ರೀತಿಯ ಸಂವಾದದಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ.ಕ್ರಿಯಾಯೋಜನೆ ರೂಪಿಸಲು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗುವುದು. ಉಪನಿರ್ದೇಶಕರು ಸಹ ಮಕ್ಕಳಲ್ಲಿ ಇಂತಹ ಚಟುವಟಿಕೆಗಳ ಬಗ್ಗೆ ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.