ದೀಪಾವಳಿ ಸಂಭ್ರಮ ಇಮ್ಮಡಿಗೊಳಿಸಿದ ಹೋರಿ ಹಬ್ಬ

7

ದೀಪಾವಳಿ ಸಂಭ್ರಮ ಇಮ್ಮಡಿಗೊಳಿಸಿದ ಹೋರಿ ಹಬ್ಬ

Published:
Updated:

ಹಾವೇರಿ: ಶರವೇಗದಲ್ಲಿ ಓಡುವ ಹೋರಿಗಳು, ಅವುಗಳನ್ನು ಹಿಡಿಯಲು ದುಂಬಾಲು ಬೀಳುವ ಯುವಕರು, ಹೋರಿ ಕೈಗೆ ಸಿಕ್ಕಾಗ ಮುಗಿಲು ಮುಟ್ಟುವ ಕೇಕೆ ಸಿಳ್ಳುಗಳು, ಹೋರಿಗಳು ಹಿಡಿಯುವವರನ್ನು ಎಳೆದುಕೊಂಡು ಹೋದಾಗ ಏನಾಗುವುದೋ ಎನ್ನುವ ಆತಂಕ, ಯುವಕರ ಕೈಗೆ ಸಿಗದಿದ್ದಾಗ ಹೋರಿ ಮಾಲೀಕರ ವಿಜಯೋತ್ಸವ, ಹೋರಿ ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡ ಹತ್ತಕ್ಕೂ ಹೆಚ್ಚು ಯುವಕರು ಆಸ್ಪತ್ರೆಗೆ ದಾಖಲು...!ದೀಪಾವಳಿ ಪಾಡ್ಯ ದಿನದಂದು ಗುರುವಾರ ನಗರದ ವೀರಭದ್ರೇಶ್ವರ ದೇವಸ್ಥಾನದ ಎದುರು ನಡೆದ ಹೋರಿ ಬೆದರಿಸುವ (ಕೊಬ್ಬರಿ ಹೋರಿ) ಸ್ಪರ್ಧೆ ಯಲ್ಲಿ ಕಂಡು ಬಂದ ದೃಶ್ಯಗಳು.ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ನಡೆಯುವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಿತಿ ಆಯೋಜಿಸುವ ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹಾವೇರಿ ನಗರದ ನೂರಾರು ಹೋರಿ ಗಳಲ್ಲಿದೇ ಸುತ್ತ ಮುತ್ತಲಿನ ಗ್ರಾಮಗಳ ಹೋರಿಗಳು ಸಹ ಭಾಗವಹಿಸಿದ್ದವು.ಇಡೀ ವರ್ಷ ಮೇಯಿಸಿದ ಹೋರಿ ಗಳಿಗೆ ಬಣ್ಣ ಬಣ್ಣದ ಝೂಲಗಳನ್ನು, ಕಾಲಿಗೆ ಗಗ್ಗರಿಗಳನ್ನು ಹಾಕಲಾಗಿತ್ತ ಲ್ಲದೇ, ಕೊರಳಲ್ಲಿ ಗೆಜ್ಜೆ ಸರ, ಒಣ ಕೊಬ್ಬರಿ ಸರ, ಕೊಂಬುಗಳನ್ನು ರಿಬ್ಬನ್, ಬಣ್ಣ ಬಣ್ಣದ ಬಲೂನ್ ಕಟ್ಟಿ ಸಿಂಗರಿ ಸಲಾಗಿತ್ತು. ಹೋರಿಗಳಿಗೆ ಇಟ್ಟ ಹೆಸರು ಸೂಚಿಸಲು ಅವುಗಳ ಮೇಲೆ ಭಾವಚಿತ್ರ ಇಲ್ಲವೇ ಬೊಂಬೆಗಳನ್ನು ಸಹ ಕಟ್ಟಿದ್ದು ವಿಶೇಷವಾಗಿತ್ತು.ಒಂದೊಂದು ಹೋರಿ ಓಡುವಾಗಲೂ ಹಿಡಿಯಲು ಮುಗಿ ಬೀಳುವ ಯುವಕರ ದಂಡು, ಹೋರಿಯನ್ನು ಹಿಡಿದಾಗ ಸಂಭ್ರಮಿಸುತ್ತಲೇ ಮತ್ತೊಂದು ಹೋರಿ ಹಿಡಿಯಲು ಸಜ್ಜಾಗುತ್ತಿದ್ದ ದೃಶ್ಯ ರೋಚಕವಾಗಿತ್ತು. ಹೋರಿ ಹಿಡಿಯುವ ಸಂದರ್ಭದಲ್ಲಿ ಸಣ್ಣ ಪುಟ್ಟ ಗಾಯ ಗಳಿಂದ ಹತ್ತಕ್ಕೂ ಹೆಚ್ಚು ಯುವಕರು ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವ ರೆಲ್ಲರೂ ಪ್ರಾಣಾಪಾಯದಿಂದ ಪಾರಾ ಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry