ದೀಪಿಕಾಗೆ ಹೊಗಳಿಕೆಯ ಟ್ವೀಟೋಪಚಾರ

7

ದೀಪಿಕಾಗೆ ಹೊಗಳಿಕೆಯ ಟ್ವೀಟೋಪಚಾರ

Published:
Updated:

`ತಲೆಯಲ್ಲಿ ನೆರೆತ ಕೂದಲು, ಹಣೆ ಮೇಲೆ ಸುಕ್ಕುಗಟ್ಟಿದ ಚರ್ಮ ಅವರಿಗೆ ವಯಸ್ಸು ಆಗಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಈತ ಇಂದಿಗೂ ಕೂಡ ಸೌಥ್ ಇಂಡಿಯನ್ ಬಾಕ್ಸ್ ಆಫೀಸ್‌ನ ಕಿಂಗ್. ಅವರ ಚಿತ್ರಗಳೂ ಅಂದರೆ ಕರ್ನಾಟಕ, ಆಂಧ್ರ ಹಾಗೂ ಜಪಾನ್ ದೇಶದ ಪ್ರಜೆಗಳು ಮುಗಿಬೀಳುತ್ತಾರೆ. ವಯಸ್ಸು ದೇಹಕ್ಕಷ್ಟೇ; ಮನಸ್ಸಿಗಲ್ಲ ಎಂಬ ಮಾತು ಇಂತಹವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು. ಅವರೇ ಸೂಪರ್ ಸ್ಟಾರ್ ರಜನಿಕಾಂತ್.ಸದ್ಯಕ್ಕೆ ರಜನಿ ಥ್ರೀಡಿ ಸಿನಿಮಾ `ಕೊಚ್ಚಾಡಿಯನ್~ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ವಿಶೇಷ ಸುದ್ದಿ- ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ರಜನಿಕಾಂತ್ ಅವರನ್ನು ಅಪ್ಪ ಅಂತ ಕರೆದಿರುವುದು!ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ `ಕೊಚ್ಚಾಡಿಯನ್~ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿ ಜತೆ ನಟಿಸುತ್ತಿದ್ದಾರೆ. ಇಂತಹ ವೇಳೆ ಅವರು ರಜನಿಯನ್ನು ಅಪ್ಪಾ ಎಂದೂ, ಲತಾ ರಜನಿಕಾಂತ್ ಅವರನ್ನು ಅಮ್ಮ ಎಂದೂ ಕರೆದಿದ್ದಾರೆ.ಕೇರಳದಲ್ಲಿ `ಕೊಚ್ಚಾಡಿಯನ್~ ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಯಿತು. ಅಲ್ಲಿಂದ ಚೆನ್ನೈಗೆ ಹಿಂತಿರುಗಿದ ನಂತರ ನಿರ್ದೇಶಕಿ ಸೌಂದರ್ಯ `ಎಲ್ಲರಿಗೂ ನನ್ನ ಕಡೆಯಿಂದ ಹಾಯ್, ಕೇರಳದಲ್ಲಿ ಶೂಟಿಂಗ್ ಮುಗಿಸಿ ಚೆನ್ನೈಗೆ ಹಿಂತಿರುಗಿದ್ದೇವೆ. ಎರಡನೇ ಹಂತದ ಶೂಟಿಂಗ್ ಅಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದರಲ್ಲೂ ದೀಪಿಕಾಳೊಂದಿಗೆ ಕೆಲಸ ಮಾಡಿದ್ದನ್ನಂತೂ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಆಕೆಯೊಂದಿಗೆ ಶೂಟಿಂಗ್ ಸ್ಪಾಟ್‌ನಲ್ಲಿ ಕಳೆದ ಒಂದೊಂದು ಕ್ಷಣವೂ ನನಗೆ ಖುಷಿ ಕೊಟ್ಟಿದೆ. ಶಿ ಇಸ್ ಸಚ್ ಎ ಡಾರ್ಲಿಂಗ್. ಅವಳು ಎಲ್ಲರ ಮುದ್ದಿನ ಅರಗಿಣಿ~ ಅಂತ ಟ್ವೀಟಿಸಿದ್ದಾರೆ.ರಜನಿಕಾಂತ್ ಅವರ ಮಗಳು ಸೌಂದರ್ಯ `ಓಂ ಶಾಂತಿ ಓಂ~ ಚಿತ್ರದಲ್ಲಿ ಮೋಡಿ ಮಾಡಿದ ಹುಡುಗಿ ದೀಪಿಕಾ ಅವರ ಕೆಲಸ ಕಂಡು ಪರವಶಳಾಗಿದ್ದಾಳಂತೆ. `ನಾನು ಈ ಹುಡುಗಿಯನ್ನಿಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ನನ್ನ ಅಪ್ಪ-ಅಮ್ಮನ ಅಪಾರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದ ಈಕೆಗಿದೆ. ಜತೆಗೆ ಇಡೀ ಚಿತ್ರತಂಡ ಅವಳ ಮೇಲೆ ಪ್ರೀತಿ ಇರಿಸಿಕೊಂಡಿದೆ. ನಿನ್ನನ್ನು ಈಗಲೇ, ಈ ಕ್ಷಣವೇ ನೋಡಬೇಕು ಅಂತ ನನ್ನ ಮನಸ್ಸು ತುಡಿಯುತ್ತಿದೆ. ನನ್ನ ಬಾಹುಗಳಿಂದ ಗಟ್ಟಿಯಾಗಿ ಅಪ್ಪಿಕೊಳ್ಳಬೇಕು ಎಂಬ ಆಸೆ ಉಕ್ಕುತ್ತಿದೆ~ ಎಂದು ಭಾವಾವೇಶಕ್ಕೆ ಬಿದ್ದವರಂತೆ ಸೌಂದರ್ಯ ಟ್ವೀಟ್ ಮಾಡಿದ್ದಾರೆ.`ನಿಜಕ್ಕೂ ನಾನು ಅದೃಷ್ಟವಂತಳು. ನಿಮಗೆಲ್ಲಾ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನಿಮ್ಮ ಈ ಎಲ್ಲ ಪ್ರೀತಿಯ ಮಾತುಗಳು ನನಗೆ ತುಂಬಾ ಕಂಫರ್ಟ್ ಅನಿಸುತ್ತಿದೆ. ಮುಂದಿನ ಚಿತ್ರೀಕರಣದಲ್ಲಿ ಇನ್ನು ಹೆಚ್ಚಿನ ಉತ್ಸಾಹದಿಂದ ಭಾಗವಹಿಸುತ್ತೇನೆ. ನೀವು ಅತ್ಯುತ್ತಮ ನಿರ್ದೇಶಕಿ. ನಿಮ್ಮ ಒಡನಾಟ ಸಿಕ್ಕ್ದ್ದಿದು ನನಗೂ ಹೆಚ್ಚಿನ ಖುಷಿ ತಂದಿದೆ. ನಾನು ಅಪ್ಪ, ಅಮ್ಮ (ರಜನಿಕಾಂತ್-ಲತಾ)ನನ್ನು ತುಂಬಾ ಪ್ರೀತಿಸುತ್ತೇನೆ. ಹಾಗೆಯೇ ನಿಮ್ಮನ್ನು ಆದಷ್ಟೂ ಬೇಗ ನೋಡುತ್ತೇನೆ. ಆ ಕ್ಷಣಕ್ಕಾಗಿ ನಾನು ಕೂಡ ಕಾತರದಿಂದ ಕಾಯುತ್ತಿದ್ದೇನೆ~- ಇದು ದೀಪಿಕಾ ಪಡುಕೋಣೆ ಪ್ರತಿ ಟ್ವೀಟ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry