ಶನಿವಾರ, ಮೇ 28, 2022
31 °C
ವಿಶ್ವಕಪ್ ಆರ್ಚರಿ

ದೀಪಿಕಾ ಕುಮಾರಿ ಪರಾಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಭಾರತದ ದೀಪಿಕಾ ಕುಮಾರಿ ಕೊಲಂಬಿಯದ ಮೆಡೆಲಿನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಸ್ಟೇಜ್-3' ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು.ಮಹಿಳೆಯರ ರಿಕರ್ವ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಅಮೆರಿಕದ ಮಿರಾಂಡಾ ಲೀಕ್ 6-2 ರಲ್ಲಿ ದೀಪಿಕಾ ಅವರನ್ನು ಮಣಿಸಿದರು. ಮಿರಾಂಡಾ ಆ ಬಳಿಕ 6-5 ರಲ್ಲಿ ಚೀನಾದ ಯುವಾನ್ ಸಿ ವಿರುದ್ಧ ಗೆಲುವು ಪಡೆದು ಫೈನಲ್‌ಗೆ ಮುನ್ನಡೆದರು.ಏಳನೇ ಶ್ರೇಯಾಂಕ ಹೊಂದಿದ್ದ ದೀಪಿಕಾ ಮೊದಲ ಪಂದ್ಯದಲ್ಲಿ ಗ್ವಾಟೆಮಾಲಾದ ರೆಗಿನಾ ಮರಿಯಾ ರೊಮೆರೊ ವಿರುದ್ಧ 6-0 ರಲ್ಲಿ ಗೆಲುವು ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ 6-4 ರಲ್ಲಿ ಡೆನ್ಮಾರ್ಕ್‌ನ ಕರೀನಾ ಕ್ರಿಸ್ಟಿಯಾನ್‌ಸೆನ್ ಅವರನ್ನು ಸೋಲಿಸಿದ್ದರು.ಭಾರತದ ಇತರ ಸ್ಪರ್ಧಿಗಳು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹಂತದಲ್ಲೇ ನಿರಾಸೆ ಎದುರಿಸಿದರು. ಎಂಟನೇ ಶ್ರೇಯಾಂಕ ಹೊಂದಿದ್ದ ಲೈಶ್ರಾಮ್ ಬೊಂಬ್ಯಾಲ ದೇವಿ 2-6 ರಲ್ಲಿ ರಷ್ಯಾದ ಇನಾ ಸ್ಟೆಪನೋವಾ ಎದುರು ಪರಾಭವಗೊಂಡರು.ಪುರುಷರ ರಿಕರ್ವ್ ವಿಭಾಗದಲ್ಲಿ ಅತಾನು ದಾಸ್ ಮತ್ತು ತರುಣ್‌ದೀಪ್ ರಾಯ್ ಹದಿನಾರರ ಘಟ್ಟದಲ್ಲಿ ಸೋಲು ಅನುಭವಿಸಿದರು. ಭಾರತ ಸ್ಪರ್ಧಿಗಳು ಇದೀಗ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.