ದೀಪಿಕಾ, ರಣವೀರ್‌ ವಿರುದ್ಧ ದೂರು

7

ದೀಪಿಕಾ, ರಣವೀರ್‌ ವಿರುದ್ಧ ದೂರು

Published:
Updated:

ಜೈಪುರ (ಪಿಟಿಐ): ಬಿಡುಗಡೆಗೆ ಸಜ್ಜಾಗಿರುವ ‘ರಾಮಲೀಲಾ’ ಚಿತ್ರದ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ , ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್‌ವೀರ್‌ ಸಿಂಗ್‌ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಿನಿಮಾದಲ್ಲಿ ಅಶ್ಲೀಲ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ದೃಶ್ಯಗಳಿವೆ ಎಂದು ಆರೋಪಿಸಿ ಆರ್‌ ಬಿ ಯಾದವ್‌ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.ಸ್ಥಳೀಯ ನ್ಯಾಯಾಲಯ ಶನಿವಾರ ನೀಡಿದ ನಿರ್ದೇಶನದ ಮೇರೆಗೆ ಭಾನುವಾರ ಇಲ್ಲಿನ ಶ್ಯಾಮ್‌ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry