ದೀಪಿಕಾ ಶ್ರೇಷ್ಠ ಸಾಧನೆ

7

ದೀಪಿಕಾ ಶ್ರೇಷ್ಠ ಸಾಧನೆ

Published:
Updated:

ನವದೆಹಲಿ (ಪಿಟಿಐ): ಸ್ಕ್ವಾಷ್ ವಿಶ್ವ ರ‌್ಯಾಂಕಿಂಗ್‌ನಲ್ಲಿ ದೀಪಿಕಾ ಪಲ್ಲಿಕಲ್ ಭಾರತದ ಮಟ್ಟಿಗಿನ ದಾಖಲೆ ಸಾಧನೆ ಮಾಡಿದ್ದಾರೆ.

ವಿಶ್ವ ಮಹಿಳಾ ಸ್ಕ್ವಾಷ್ ಆಟಗಾರ್ತಿಯರ ಸಂಸ್ಥೆ (ಡಬ್ಲ್ಯುಐಎಸ್‌ಪಿಎ)ಯ ಪಾಯಿಂಟ್ಸ್ ಪಟ್ಟಿಯಲ್ಲಿ ಒಟ್ಟು 5,175.75 ಪಾಯಿಂಟ್ಸ್ ಗಳಿಸಿದ ಅವರು ಹತ್ತನೇ ಕ್ರಮಾಂಕಕ್ಕೆ ಏರಿದ್ದಾರೆ. ಇದು ಭಾರತೀಯ ಆಟಗಾರ್ತಿಯೊಬ್ಬರ ಈವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಇವರು ಹಿಂದೆ ಇದೇ ಪಟ್ಟಿಯಲ್ಲಿ 20ರ ಗಡಿ ತಲುಪಿದ್ದಾಗ, ಆ ಸಾಧನೆ ಮಾಡಿದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದರು.

ಚೆನ್ನೈ ನಗರದ 21ರ ಹರೆಯದ ಈ ಆಟಗಾರ್ತಿ ಮುಂದಿನ ದಿನಗಳಲ್ಲಿ ತಮ್ಮ ಕ್ರಮಾಂಕವನ್ನು ಇನ್ನಷ್ಟೂ ಉತ್ತಮ ಪಡಿಸಿಕೊಳ್ಳುವ ಹೆಗ್ಗುರಿ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry