ಗುರುವಾರ , ಜೂನ್ 24, 2021
29 °C

ದೀಪಿಕಾ ಹೋಳಿ ಟಿಪ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಯಿಂದ ಬಂದು ಸ್ನೇಹಿತರೊಡನೆ ಹೋಳಿಯಾಟ ಆಡಿದ ನೆನಪು ನಟಿ ದೀಪಿಕಾ ಪಡುಕೋಣೆ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಹೋಳಿ ಅವರ ಮೆಚ್ಚಿನ ಹಬ್ಬಗಳಲ್ಲಿ ಒಂದು. ಬೆಂಗಳೂರಿನಲ್ಲಿ ಬೆಳೆದ ದೀಪಿಕಾ ಆ ನಗರಿಯಲ್ಲಿ ಬಣ್ಣ ಎರಚಾಡಿದ ಕ್ಷಣಗಳನ್ನು ಮೆಲುಕು ಹಾಕುವುದರ ಜೊತೆಗೆ ಬಣ್ಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ ಎಂದು ಟಿಪ್ಸ್‌ ಕೂಡ ನೀಡಿದ್ದಾರೆ.‘ಹಿಂದೆ ಬಣ್ಣದಾಟ ಆಡುವುದೆಂದರೆ ಇನ್ನಿಲ್ಲದ ಖುಷಿ. ಈಗ ಪರಿಸ್ಥಿತಿ ಹಾಗಿಲ್ಲ. ಹೋಳಿಯಲ್ಲಿ ಬಣ್ಣದಾಟ ಆಡಿದರೆ ದೇಹ ಸಾಕಷ್ಟು ದಣಿಯುತ್ತದೆ. ಮೊದಲು ಇದ್ದ ಉತ್ಸಾಹ ಈಗ ಇರುವುದು ಹೇಗೆ ಸಾಧ್ಯ? ಬಣ್ಣದ ಜಗತ್ತಿನ ಹಂಗು ಇರುವುದರಿಂದ ಈಗ ಕೂದಲಿನ ಆರೈಕೆ ಬಲು ಮುಖ್ಯ. ಬಣ್ಣದಾಟಕ್ಕೆ ಮೊದಲೇ ಕೂದಲಿಗೆ ಚೆನ್ನಾಗಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡಬೇಕು.

ಆಮೇಲೆ ಕೂದಲನ್ನು ಗಂಟುಕಟ್ಟಬೇಕು. ಸಾಧ್ಯವಾದರೆ ಒಂದು ಬಟ್ಟೆಯಿಂದ ಅಷ್ಟೂ ಕೂದಲು ಮುಚ್ಚುವಂತೆ ನೋಡಿಕಕೊಂಡರೆ ಒಳಿತು. ಹೋಳಿ ಆಟಕ್ಕೆ ಬಳಸುವ ಬಣ್ಣದಲ್ಲಿ ಅಕಸ್ಮಾತ್‌ ರಾಸಾಯನಿಕಗಳು ಇದ್ದರೆ ಕೂದಲು ಸಮಸ್ಯೆಗೆ ಸಿಕ್ಕಿತೆಂದೇ ಅರ್ಥ. ನಾನು ಈ ವಿಷಯದಲ್ಲಿ ಮೊದಲಿನಿಂದಲೂ ಎಚ್ಚರಿಕೆ ವಹಿಸುತ್ತಾ ಬಂದಿದ್ದೇನೆ. ಈಗ ಹೋಳಿ ಆಟ ಆಡುವ ಉತ್ಸಾಹವೇ ಇಲ್ಲ’ ಎಂಬುದು ದೀಪಿಕಾ ಪ್ರತಿಕ್ರಿಯೆ.ಕಳೆದ ವರ್ಷ ದೀಪಿಕಾ ಅಭಿನಯದ ‘ಯೇ ಜವಾನಿ ಹೈ ದಿವಾನಿ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಗೋಲಿಯೋಂ ಕಿ ರಾಸಲೀಲಾ–ರಾಮ್‌ಲೀಲಾ’ ಹಾಗೂ ‘ರೇಸ್ 2’ ಚಿತ್ರಗಳು ಬಿಡುಗಡೆಯಾಗಿ ಯಶಸ್ಸು ಕಂಡಿದ್ದವು. ಈಗ ಅವರು ‘ಹ್ಯಾಪಿ ನ್ಯೂ ಇಯರ್‌’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಬಾರಿ ಚಿತ್ರದ ಸೆಟ್‌ನಲ್ಲೇ ಹೋಳಿಹಬ್ಬ ಆಚರಿಸುವ ಸಾಧ್ಯತೆ ಇದ್ದು, ಅದಕ್ಕಾಗಿ ದೀಪಿಕಾ ಉತ್ಸಾಹದಿಂದ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.