ದುಂದುವೆಚ್ಚಕ್ಕೆ ಅವಕಾಶ ಇಲ್ಲ: ಶಾಸಕ

7
ದಸರಾ ಹಬ್ಬ: ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ

ದುಂದುವೆಚ್ಚಕ್ಕೆ ಅವಕಾಶ ಇಲ್ಲ: ಶಾಸಕ

Published:
Updated:

ಶಿವಮೊಗ್ಗ: ಪ್ರಸಕ್ತ ಸಾಲಿನ ದಸರಾ ಹಬ್ಬವನ್ನು ದುಂದುವೆಚ್ಚಕ್ಕೆ ಅವಕಾಶ ಕೊಡದೆ, ಅಚ್ಚುಕಟ್ಟಾಗಿ ನೆರವೇರಿಸಲು ಸೋಮವಾರ ನಡೆದ ನಗರಸಭೆಯ ತುರ್ತು ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.  ದಸರಾ ಹಬ್ಬ ಆಚರಣೆ ಹಿನೆ್ನಲೆಯಲಿ್ಲ ವಿವಿಧ ಸಮಿತಿಗಳ ರಚನೆ, ಅಂದಾಜು ವೆಚ್ಚ ಮತ್ತಿತರ ವಿಷಯಗಳಲ್ಲಿ ನಿರ್ಧಾರ ಕೈಗೊಳು್ಳವ ಅಧಿಕಾರವನು್ನ ನಗರಸಭಾ ಅಧ್ಯಕ್ಷರಿಗೆ ನೀಡಲು ಸಭೆ ಸರ್ವಾನುಮತದಿಂದ ಒಪಿ್ಪಗೆ ಸೂಚಿಸಿತು.ಸಭೆಯಲಿ್ಲ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನಕುಮಾರ್‌, ಶಿವಮೊಗ್ಗ ದಸರಾಕೆ್ಕ ಉತ್ತಮ ಪರಂಪರೆ ಇದೆ. ಆದರೆ, ಯಾವುದೇ ದುಂದುವೆಚ್ಚಕೆ್ಕ ಅವಕಾಶ ಕೊಡದೆ, ಸುಸೂತ್ರವಾಗಿ ನೆರವೇರಿಸಲು ಸರ್ಕಾರ ಅನುದಾನ ನೀಡಲಿದೆ. ಹಳೆಯ ದಸರಾ ವೆಚ್ಚಗಳನು್ನ ಗಮನಿಸಿ ಸುಮಾರು `1ಕೋಟಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.ವಿಧಾನಪರಿಷತ್‌ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ದಸರಾ ಉತ್ಸವದ ಪರಂಪರೆಗೆ ಯಾವುದೇ ರೀತಿಯ ಧಕೆ್ಕಯಾಗಬಾರದು. ಅನುದಾನ ಮುಖ್ಯ ಅಲ್ಲ; ಕಾರ್ಯಕ್ರಮಗಳು ಮುಖ್ಯ ಎಂದರು. ಇದಕೂ್ಕ ಮೊದಲು  ಮಾತನಾಡಿದ ಪ್ರತಿಪಕ್ಷದ ಸದಸ್ಯ ಎನ್‌.ಜೆ.ರಾಜಶೇಖರ್‌, ಇತಿಹಾಸ ಪ್ರಸಿದ್ಧ ಶಿವಮೊಗ್ಗ ದಸರಾದ ಅದೂ್ದರಿತನಕೆ್ಕ ಯಾವುದೇ ರೀತಿಯ ಧಕೆ್ಕಯಾಗದಂತೆ ನೋಡಿಕೊಳ್ಳಬೇಕು.

ಕಳೆದ ವರ್ಷ ` 50ಲಕ್ಷ ವೆಚ್ಚದಲ್ಲಿ ಸರ್ಕಾರ  `30ಲಕ್ಷ  ಮಂಜೂರು ಮಾಡಿದ್ದರೂ ಅದು ಬಿಡುಗಡೆಯಾಗಿಲ್ಲ. ಈ ಬಾರಿ ಜಿಲಾ್ಲಧಿಕಾರಿಗಳು ಕೇವಲ `25ಲಕ್ಷ ಅನುದಾನ ನೀಡುವ ಪ್ರಸಾ್ತವ ಮಂಡಿಸಿದಾ್ದರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.  ಪ್ರತಿಪಕ್ಷದ ಸದಸ್ಯರಾದ ರೇಣುಕಾ ನಾಗರಾಜ್, ಸುನೀತಾ ಅಣ್ಣಪ್ಪ, ಮೋಹನರೆಡಿ್ಡ, ಎಸ್‌.ರಾಮು, ಸುರೇಖಾ ಮುರುಳೀಧರ್‌ ಮತ್ತಿತರರು ರಾಜಶೇಖರ್‌ಗೆ ದನಿ ನೀಡಿದರು.ಇದಕೆ್ಕ ಪ್ರತಿಕ್ರಿಯಿಸಿದ ಕಾಂಗೆ್ರಸ್‌ ಸದಸ್ಯ ಎಸ್‌.ಕೆ.ಮರಿಯಪ್ಪ, ಈ ಹಿಂದೆ ಆಡಳಿತದಲಿ್ಲದ್ದ ಪಕ್ಷ ಸದಸ್ಯರನು್ನ ಕತ್ತಲಲಿ್ಲಟು್ಟ ತೀರ್ಮಾನಗಳನು್ನ ಕೈಗೊಳು್ಳತ್ತಿತು್ತ. ಆದರೆ, ಈಗ ಸಭೆಯಲ್ಲೇ ತೀರ್ಮಾನಗಳನು್ನ ಕೈಗೊಂಡು ಪಾರದರ್ಶಕವಾಗಿ ಮಾಡಲು ಮುಂದಾಗಿದ್ದೇವೆ ಎಂದರು. ಈ ಮಾತಿಗೆ ಜೆಡಿಎಸ್‌ನ ನಾಗರಾಜ ಕಂಕಾರಿ, ಕಾಂಗೆ್ರಸ್‌ನ ವಿಜಯಲಕ್ಷ್ಮಿ ಪಾಟೀಲ್‌ ಮತ್ತಿತರರು ಬೆಂಬಲ ನೀಡಿದರು. ಮರಿಯಪ್ಪ ಅವರ ಮಾತಿನ ಕುರಿತಂತೆ ಆಡಳಿತ ಮತು್ತ   ವಿರೋಧ  ಪಕ್ಷಗಳ ಸದಸ್ಯರ ನಡುವೆ ವಾಗಾ್ವದ ನಡೆಯಿತು. ಕೊನೆಗೆ ಅಧ್ಯಕೆ್ಷ ಖುರ್ಷಿದ್‌ ಭಾನು, ‘ಒಬ್ಬೊಬ್ಬರಾಗಿ ಮಾತನಾಡಿ’ ಎಂದು ಒಂದೇ ಮಾತು ಹೇಳಿ ಎಚ್ಚರಿಕೆ ನೀಡಿದರು.ಇದಕೂ್ಕ ಮೊದಲು ನಗರಸಭಾ ಆಯುಕ್ತ ಮೂಕಪ್ಪ ಕರಭೀಮಣ್ಣನವರ್‌ ಮಾತನಾಡಿ, ದಸರಾ ಹಬ್ಬದ ಬನಿ್ನ ಮುಡಿಯುವ ಸ್ಥಳದ ಬಗೆ್ಗ ಅಂತಿಮ ತೀರ್ಮಾನ ಇನೂ್ನ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಥಮ ಸಭೆಯಾಗಿದ್ದರಿಂದ ಸದಸ್ಯರು–ಅಧಿಕಾರಿಗಳು ಸಭೆಗೆ ಪರಸ್ಪರ ಪರಿಚಯಿಸಿ ಕೊಂಡರು. ಉಪಾಧ್ಯಕೆ್ಷ ರೇಖಾ ಚಂದ್ರಶೇಖರ್‌ ಉಪಸಿ್ಥತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry