ಬುಧವಾರ, ಫೆಬ್ರವರಿ 24, 2021
23 °C
ನಿರ್ವಹಣೆ ಕೊರತೆ: ಮಳೆ ನೀರು ಸೋರಿಕೆ; ಶಾಶ್ವತ ಪರಿಹಾರಕ್ಕೆ ಕೋರಿ ನಗರಸಭೆಗೆ ಪತ್ರ

ದುಃಸ್ಥಿತಿಯಲ್ಲಿ ಯುದ್ಧನೌಕೆ ಸಂಗ್ರಹಾಲಯ

ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ದುಃಸ್ಥಿತಿಯಲ್ಲಿ ಯುದ್ಧನೌಕೆ ಸಂಗ್ರಹಾಲಯ

ಕಾರವಾರ: ದೇಶದಲ್ಲಿಯೇ 2ನೇ ಅತಿ ದೊಡ್ಡ ಯುದ್ಧನೌಕೆ ಸಂಗ್ರಹಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಚಾಪೆಲ್‌ ವಾರ್‌ಶಿಪ್‌ ಮ್ಯೂಸಿಯಂ ಸೂಕ್ತ ನಿರ್ವಹಣೆ ಇಲ್ಲದೇ ದುಃಸ್ಥಿತಿಯ ಹಾದಿ ಹಿಡಿದಿದೆ.

ರವೀಂದ್ರನಾಥ ಟ್ಯಾಗೋರ್‌ ಕಡಲತೀರದ ಅಂಚಿನಲ್ಲೇ ಈ ಮ್ಯೂಸಿ­ಯಂ ನೆಲೆಯೂರಿದೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಇಲ್ಲಿ ನೀರು ಸೋರಿಕೆಯಾಗುತ್ತದೆ. ಇದರಿಂದ ಒಳಗಿನ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ನೀರು ಸೋರಿಕೆ­ಯಾಗುವು­ದನ್ನು ತಪ್ಪಿಸಲು ಮಳೆಗಾಲ­ದಲ್ಲಿ ಪ್ಲಾಸ್ಟಿಕ್‌ ಹೊದಿಕೆ ರಕ್ಷಿಸಲಾಗುತ್ತಿದೆ. ಮಳೆಯ ಅಬ್ಬರಕ್ಕೆ ಈ ಹೊದಿಕೆ ಕೂಡ ಕಿತ್ತುಹೋಗುತ್ತಿದೆ.ಸಂಗ್ರಹಾಲಯದ ಪ್ರಮುಖ ನಿರ್ವಹಣೆಯನ್ನು ನೌಕಾಸೇನೆ ಮಾಡಿದರೆ, ಮ್ಯೂಸಿಯಂ ಪ್ರವೇಶ ಶುಲ್ಕದಿಂದ ಬರುವ ಆದಾಯದಲ್ಲಿ ನಗರಸಭೆಯು ಸಣ್ಣಪುಟ್ಟ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳು­ತ್ತದೆ. ಪ್ರವೇಶ ಶುಲ್ಕ ದೊಡ್ಡವರಿಗೆ ₨ 15 ಹಾಗೂ ಮಕ್ಕಳು ಹಾಗೂ ಶಾಲಾ ಮಕ್ಕಳಿಗೆ ₨ 5 ಇದೆ. ರಜಾ ದಿನಗಳಲ್ಲಿ ಪ್ರತಿದಿನ ಸುಮಾರು ₨ 3 ಸಾವಿರದಿಂದ ₨ 5 ಸಾವಿರದವರೆಗೆ ಆದಾಯ ಬರುತ್ತದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೇ ಸಂಗ್ರಹಾಲಯ ಸೊರಗುತ್ತಿದೆ.ಕಡಲ ತೀರದ ಸೌಂದರ್  ಸವಿಯಲು ಬರುವ ನೂರಾರು ಪ್ರವಾಸಿಗರು ಸಮೀಪದಲ್ಲೇ ಇರುವ ಚಾಪೆಲ್‌ ಯುದ್ಧನೌಕೆ ಸಂಗ್ರಹಾಲಯಕ್ಕೂ ಭೇಟಿ ನೀಡುತ್ತಾರೆ. ದೈತ್ಯಾಕಾರದ ನೌಕೆಯ ಒಳಹೊಕ್ಕು ನೌಕೆಯ ಕಾರ್ಯವೈಖರಿ ಹಾಗೂ ಅದರ ಇತಿಹಾಸವನ್ನು ತಿಳಿದುಕೊಳ್ಳಬಹುದಾ­ಗಿದೆ. ಇಲ್ಲಿನ ಗೈಡ್‌ಗಳು ಇದರ ಬಗೆಗಿನ ಕಿರು ಮಾಹಿತಿಯನ್ನು ವಿವರಿಸುತ್ತಾರೆ.ಕೆಟ್ಟು ನಿಂತ ಜನರೇಟರ್‌: ಸಂಗ್ರ ಹಾಲಯದಲ್ಲಿನ ಜನರೇಟರ್‌ ಕೆಟ್ಟು ನಿಂತು ಆರು ತಿಂಗಳುಗಳು ಕಳೆದಿವೆ. ಆದರೆ ದುರಸ್ತಿ ಕಾರ್ಯ ಮಾತ್ರ ಆಗಿಲ್ಲ. ನೌಕೆಯೊಳಗೆ ಚಾಪೆಲ್‌ ಶಿಪ್‌ ಬಗ್ಗೆ ಮಾಹಿತಿ ನೀಡುವ ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ವಿದ್ಯುತ್‌ ಕೈಕೊ ಟ್ಟರೆ ಪ್ರವಾಸಿಗರು ನಿರಾಶೆಯಿಂದ ಹಿಂದಿರುಗಬೇಕಾದ ಪರಿಸ್ಥಿತಿ ಇದೆ. ಇನ್ನೂ ಇಲ್ಲಿಗೆ ಬರುವ ಪ್ರವಾಸಿ ಗ­ರಿ­ಗಾಗಿಯೇ ಇದರ ಸಮೀಪದಲ್ಲಿಯೇ ಶೌಚಾಲಯ ನಿರ್ಮಾಣ ಮಾಡಿ ಮೂರ್‍್ನಾಲ್ಕು ವರ್ಷ ಕಳೆದರೂ ಅದು ಉದ್ಘಾಟನೆ ಭಾಗ್ಯ ಕಂಡಿಲ್ಲ.ನಗರಸಭೆಗೆ ಪತ್ರ: ನೌಕೆಯಲ್ಲಿ ಸೋರಿಕೆಯಾಗುತ್ತಿದ್ದ ಜಾಗದಲ್ಲಿ ಹಿಂದೆ ಗ್ಲಾಸ್‌ ರೆಸಿನ್‌ ಪ್ಲಾಸ್ಟರ್‌ (ಜಿಆರ್‌ಪಿ) ಕೋಟಿಂಗ್‌ ಮಾಡಲಾಗಿತ್ತು. ಆದರೆ ಪ್ರವಾ­ಸಿ­ಗರ ಓಡಾಟದಿಂದ ಆ ಜಾಗ ದಲ್ಲಿ ಮತ್ತೆ ಬಿರುಕು ಕಾಣಿಸಿ­ಕೊಂಡು ಸ್ವಲ್ಪ ಸೋರಿಕೆ ಕಂಡುಬಂದಿದೆ. ಇದನ್ನು ತಡೆಗಟ್ಟಲು  20x30 ಅಳತೆಯ ಮೂರು ಪ್ಲಾಸ್ಟಿಕ್‌ ಹೊದಿಕೆಗಳನ್ನು ಹಾಕಲಾಗಿದೆ. ಆದರೆ ಇದರಿಂದಲೂ ಸೋರಿಕೆಯನ್ನು ತಡೆಗಟ್ಟಲು ಆಗುತ್ತಿಲ್ಲ. ಹಾಗಾಗಿ ಶಾಶ್ವತ ಪರಿಹಾರಕ್ಕೆ ಡಾಂಬರ್‌ಶೀಟ್‌ ಹಾಕುವಂತೆ ಇಲ್ಲಿನ ಸಿಬ್ಬಂದಿ ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.2006ರಲ್ಲಿ ಲೋಕಾರ್ಪಣೆ

1976 ರಿಂದ 2005 ರವರೆಗೆ ಭಾರತೀಯ ನೌಕಾಸೇನೆಯಲ್ಲಿ ಕಾರ್ಯ ನಿರ್ವಹಿಸಿದ ಈ ಚಾಪೆಲ್ ನೌಕೆಯನ್ನು  2006 ರ ಏಪ್ರಿಲ್ ತಿಂಗಳಿನಲ್ಲಿ ಸೇನೆಯು ಸಂಗ್ರಹಾಲಯವನ್ನು ನಿರ್ಮಿಸಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತು. ಸುಮಾರು ₨ 1.73 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗ್ರಹಾಲಯವು 2006ರ ನವೆಂಬರ್ 7ರಂದು ಲೋಕಾರ್ಪಣೆಗೊಂಡಿದೆ.ಈ ಯುದ್ಧನೌಕೆಯ ಹೆಸರು ಐಎನ್ಎಸ್ ಚಾಪೆಲ್. ಇದು ಸುಮಾರು 245 ಟನ್‌ ತೂಕ ಹೊಂದಿದ್ದು, 38.6 ಮೀ ಉದ್ದ ಹಾಗೂ 7.6ಮೀ ಎತ್ತರ ಹೊಂದಿದೆ. 24 ಕಿ.ಮೀ. ಸುತ್ತಳತೆಯಲ್ಲಿ ಕ್ಷಿಪಣಿಗಳನ್ನು ಹಾರಿಬಿಡುವ ಸಾಮರ್ಥ್ಯ ಹೊಂದಿರುವ ಈ ನೌಕೆಯು ಶತ್ರು ಯುದ್ಧ ವಿಮಾನಗಳನ್ನು ಹೊಡೆದುರುಳಿಸುವಲ್ಲಿ ಬಳಕೆಯಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.