ಗುರುವಾರ , ಏಪ್ರಿಲ್ 15, 2021
24 °C

ದುಃಸ್ವಪ್ನವಾದೀತು ಸುಂದರ ಬಾಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಗೆ ಎರಡು ಕಾರಣಗಳನ್ನು ಗುರುತಿಸಬಹುದು. ಕೆಲವರು ಮಕ್ಕಳನ್ನು ಸುಲಭವಾಗಿ ಯಾಮಾರಿಸಬಹುದಾದ್ದರಿಂದ ಅವರನ್ನೇ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಮಕ್ಕಳೇ ಬೇಕು. ಸ್ವಂತ ಅಥವಾ ಹತ್ತಿರದ ಸಂಬಂಧಿಕರ ಮಕ್ಕಳು ಇವರಿಗೆ ಸುಲಭವಾಗಿ ಸಿಗುವುದರಿಂದ ಅಂತಹವರೇ ಹೆಚ್ಚಾಗಿ ಬಲಿಯಾಗುತ್ತಾರೆ.ಇಂತಹ ಕೃತ್ಯಕ್ಕೆ ಗುರಿಯಾಗದಂತೆ ಮಕ್ಕಳನ್ನು ಕಾಪಾಡಿಕೊಳ್ಳಬೇಕಾದ ಹೊಣೆ ಪಾಲಕರದು.`ಬ್ಯಾಡ್ ಟಚ್~ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು.ಬಾಲ್ಯದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಮಕ್ಕಳು ಬೆಳೆದು ದೊಡ್ಡವರಾದ ಮೇಲೂ ಪರಿಣಾಮ ಬೀರಬಲ್ಲದು. ಆದ್ದರಿಂದ ಬಾಲ್ಯದಲ್ಲಿ ಅವರು ಇಂತಹ ಕೃತ್ಯಕ್ಕೆ ಈಡಾಗದಂತೆ ನೋಡಿಕೊಳ್ಳುವುದು ಅಗತ್ಯ. ಮಕ್ಕಳಿಗೆ ಬಾಲ್ಯ ಸಿಹಿ ಕನವರಿಕೆಯಾಗಬೇಕೇ ಹೊರತು ದುಃಸ್ವಪ್ನ ಆಗಬಾರದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.