ದುಗುಡದಿಂದ ಹೊರಬರಲು ಧ್ಯಾನ ಸಹಕಾರಿ

7

ದುಗುಡದಿಂದ ಹೊರಬರಲು ಧ್ಯಾನ ಸಹಕಾರಿ

Published:
Updated:

ಚಿಕ್ಕಮಗಳೂರು: ಆಧುನಿಕ ಯುಗದಲ್ಲಿ ಮನುಷ್ಯ ಆತಂಕದ ಸುಳಿಯಲ್ಲಿ ಸಿಲುಕಿ ದುಗುಡದಲ್ಲಿ ಜೀವನ ನಡೆಸು ವಂತಾಗಿದೆ. ಇದರಿಂದ ಹೊರಬರಲು ಭಗವಂತನ ಧ್ಯಾನ ಸಹಕಾರಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.



ನಗರ ಸಮೀಪದ ಬೀಕನಹಳ್ಳಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಮ್ಮಿ ಕೊಂಡಿದ್ದ 61ನೇ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.



ತಾಂತ್ರಿಕ ಯುಗದಲ್ಲಿ ಜಂಜಾಟ ಅಧಿಕವಾಗಿ ಜೀವನದಲ್ಲಿ ನೆಮ್ಮದಿ, ತೃಪ್ತಿ ಇಲ್ಲದಂತಾಗಿದೆ. ದುಷ್ಟ ಆಲೋಚನೆ ಬಂದಾಗ ಇಷ್ಟ ದೇವರ ನೆನಪಿಸಿಕೊಂಡು ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದರು.



ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಒಳಿತು, ಕೆಡಕಿನ ಪ್ರತಿಫಲ ಅನುಭವಿ ಸುವಂತಾಗಿದೆ. ಇದರಿಂದ ಮನುಷ್ಯನಿಗೆ ದೇವರ ಬಗ್ಗೆ ಭಯ ಮತ್ತು ಭಕ್ತಿ ಮೂಡಲು ಕಾರಣವಾಗಿದೆ ಎಂದರು.



ಗ್ರಾಮ ಪಂಚಾಯಿತಿ ಸದಸ್ಯ ಎಂ.ಪಿ.ಮಂಜೇಗೌಡ ಮಾತನಾಡಿ, ಕಳೆದ 60 ವರ್ಷಗಳಿಂದ ಅಡ್ಡಪಲ್ಲಕ್ಕಿ ಉತ್ಸವ, ಅಂಬು ಹೊಡೆಯುವುದು ಸೇರಿದಂತೆ ನಿತ್ಯ ಹೋಮ, ಹವನ ವಿಶೇಷ ಪೂಜೆಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ನಾಡಹಬ್ಬ ಸಾಂಪ್ರಾ ದಾಯಿಕವಾಗಿ ಆಚರಿಸ ಲಾಗುತ್ತಿದೆ. ಇದೇ 25ರಂದು ರಾಜ ಬೀದಿ ಉತ್ಸವ, ಪೌರಣಿಕ ನಾಟಕಗಳನ್ನು ಪ್ರದರ್ಶನದೊಂದಿಗೆ ದಸರೆಗೆ ತೆರೆ ಎಳೆಯಲಾಗುತ್ತದೆ ಎಂದರು.



ಬಸವ ಮಂದಿರದ ಜಯ ಬಸವಾ ನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರದ ಅಧ್ಯಕ್ಷ ಬಿ.ಪಿ.ನಂಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ಧಮ್ಮ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ತಾ.ಪಂ. ಉಪಾಧ್ಯಕ್ಷ ಎಚ್.ಎಸ್.ಪುಟ್ಟೇಗೌಡ, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಸೋಮಶೇಖರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ಬಿ.ವಿ.ಬಸವರಾಜು, ಬಿ.ಸಿ.ಯೋಗಾನಂದ್, ಮಂಜೇಗೌಡ ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry