ದುಗ್ಲಾಪುರ ಕೆರೆ ಹೂಳೆತ್ತಲು ಯೋಜನೆ

7
ತರೀಕೆರೆ: ಪುರಸಭೆ ಸಾಮಾನ್ಯ ಸಭೆ

ದುಗ್ಲಾಪುರ ಕೆರೆ ಹೂಳೆತ್ತಲು ಯೋಜನೆ

Published:
Updated:

ತರೀಕೆರೆ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದುಗ್ಲಾಪುರ ಮಾನಸಿ ಕೆರೆಯ ನೀರು ಬರಿದಾಗಿದ್ದು, ಕೆರೆಯಲ್ಲಿ ತುಂಬಿರುವ ಹೂಳು ತೆಗೆಯಲು ಟೆಂಡರ್ ಕರೆಯಲಾಗಿದೆ ಎಂದು ಪುರ ಸಭಾಧ್ಯಕ್ಷ ಎಂ.ನರೇಂದ್ರ ತಿಳಿಸಿದರು.ಇಲ್ಲಿನ ಪುರಸಭೆಯ ಸಭಾಂ ಗಣದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೆರೆ ಹೂಳು ತೆಗೆದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಸಾಧ್ಯ ಎಂದರು.ಕುಡಿಯುವ ನೀರನ್ನು ಸಮರ್ಪ ಕವಾಗಿ ವಿತರಿಸುವವರೆಗೂ ಜನ ಸಾಮಾನ್ಯರಿಂದ ನೀರಿನ ತೆರಿಗೆಯನ್ನು ವಸೂಲು ಮಾಡುವುದನ್ನು ನಿಲ್ಲಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜನರಿಗೆ ಹೊರೆಯಾಗದಂತೆ ಸಮಸ್ಯೆ ಪರಿಹರಿಸು ವುದಾಗಿ ಭರವಸೆ ನೀಡಿದರು. ಆಶ್ರಯ ನಿವೇಶನಗಳ ಖಾತೆ ನಮೂ ದಿಸುವಲ್ಲಿ ಭಾರಿ ಅಕ್ರಮ ನಡೆದಿದ್ದು, ಅಧಿಕಾರಿಗಳು ದಾಖಲಾತಿಗಳು ಸರಿ ಇದ್ದಲ್ಲಿ ಖಾತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪುರಸಭೆ ಕುಡಿಯುವ ನೀರಿನ ವಿತರಣೆಯಲ್ಲಿ ನಿರ್ಲಕ್ಷ್ಯ ಮನೋಭಾವನೆ ಹೊಂದಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಕಾರಣ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಸದಸ್ಯ ಪ್ರಕಾಶ್ ದೂರಿದರು.ಕಿರು ನೀರಾವರಿ ಯೋಜನೆಯಲ್ಲಿ ದೊರೆಯುವ ನೀರಿನ ಲಭ್ಯತೆಯ ಆಧಾರದ ಮೇಲೆ ವಿತರಣಾ ವ್ಯಸ್ಥೆಯ ನ್ನು ಮಾಡುವಂತೆ ಸದಸ್ಯ ಜಿಯಾವುಲ್ಲಾ ಸಲಹೆ ನೀಡಿದರು.

ಖಾಸಗಿ ಬಸ್ ನಿಲ್ದಾಣದ ಹಿಂಬದಿ ಯಲ್ಲಿರುವ ಮಾಂಸ ಮಾರಾಟ ಕೇಂದ್ರ ಅವವ್ಯಸ್ಥೆಯ ಆಗರವಾಗಿದ್ದು, ಜನ ಸಾಮಾನ್ಯರು ಮತ್ತು ಗ್ರಾಹಕರಿಗೆ ಅಲ್ಲಿನ ದುರ್ನಾಥ ಅಸಹನೀಯ ವಾ ಗಿದೆ. ಕೂಡಲೆ ಅಲ್ಲಿ ಸ್ವಚ್ಛತಾ ಕಾರ್ಯ ವನ್ನು ಕೈಗೊಳ್ಳುವಂತೆ ಸದಸ್ಯ ಉಮರ್‌ಫಾರೂಕ್ ಒತ್ತಾಯಿಸಿದರು.ಮಿನಿ ವಿಧಾನಸೌಧದ ಮುಂಭಾ ಗದಲ್ಲಿ ನಿರ್ಮಿಸಿರುವ ಶೌಚಾಲ ಯವನ್ನು ಖಾಸಗಿಯವರಿಗೆ ವಹಿಸಿ ಕೊಟ್ಟು, ಜನ ಸಾಮಾನ್ಯರಿಗೆ ಅನು ಕೂಲ ಮಾಡಿ ಕೊಡುವಂತೆ ಸದಸ್ಯ ಆಚಾರಿ ಅಶೋಕ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry