ಶುಕ್ರವಾರ, ನವೆಂಬರ್ 15, 2019
20 °C

ದುಡ್ಡಿಲ್ಲದಿದ್ದರೂ ಮಾಲೀಕರಾಗಿ..!

Published:
Updated:

 ಕೋಲ್ಕತ್ತಾ (ಪಿಟಿಐ): ಐಪಿಎಲ್ ಆಟಗಾರರನ್ನು ಖರೀದಿಸಿ ನಿಮ್ಮದೇ ಒಂದು ತಂಡ ಕಟ್ಟಬೇಕು ಎಂಬ ಆಸೆಯೇ? ಹಾಗಾದರೆ ನಿಮ್ಮ ಆಸೆ ಸಾಕಾರಗೊಳ್ಳಲು ಈ ಬಾರಿಯ ಐಪಿಎಲ್ ಟೂರ್ನಮೆಂಟ್ ಅವಕಾಶ ಒದಗಿಸಿದೆ. ಆದರೆ, ಈ ತಂಡ ಕೇವಲ ಕಾಲ್ಪನಿಕ ಮಾತ್ರ..!ಮತ್ತಷ್ಟು ಕ್ರಿಕೆಟ್ ಪ್ರೇಮಿಗಳನ್ನು  ಆಕರ್ಷಿಸುವ ಸಲುವಾಗಿ ಈ ಸಲ `ಐಪಿಎಲ್ ಫ್ಯಾಂಟಸಿ ಲೀಗ್' ಎಂಬ ಕಾಲ್ಪನಿಕ ಲೀಗ್ ಒಂದನ್ನು ಐಪಿಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೃಷ್ಟಿಸಲಾಗಿದೆ. ನಯಾ ಪೈಸೆ ಖರ್ಚು ಮಾಡದೇ ತಮಗಿಷ್ಟವಾದ ಕ್ರಿಕೆಟಿಗರನ್ನು ಖರೀದಿಸಿ ತಂಡ ಕಟ್ಟಲು ಇದರಲ್ಲಿ ಸಾಧ್ಯವಿದೆ.ಫ್ಯಾಂಟಸಿ ಲೀಗ್‌ನಲ್ಲಿ ತಂಡ ಕಟ್ಟಲು ವೆಬ್‌ಸೈಟ್ ಕಾಲ್ಪನಿಕವಾಗಿ ಒಂದು ಕೋಟಿ ರೂಪಾಯಿ ಹಣವನ್ನು ನೀಡಲಿದೆ. ಇದನ್ನು ಬಳಸಿಕೊಂಡು ಐಪಿಎಲ್‌ನ ವಿವಿಧ ತಂಡಗಳಿಗೆ ಸೇರಿದ ಬ್ಯಾಟ್ಸ್‌ಮನ್, ಬೌಲರ್‌ಗಳು, ಆಲ್ ರೌಂಡರ್‌ಗಳು ಮತ್ತು ಒಬ್ಬ ವಿಕೆಟ್ ಕೀಪರ್‌ನನ್ನು ಖರೀದಿಸಬಹುದು.ನಿಮ್ಮ ತಂಡದ ಆಟಗಾರರು, ಐಪಿಎಲ್ ಟೂರ್ನಿಯಲ್ಲಿ ನಿಜವಾದ ಆಟಗಾರರು ಆಡುವ ರೀತಿಯನ್ನು ಆಧರಿಸಿ ಅಂಕ ಪಡೆಯುತ್ತಾರೆ. ಕ್ರೀಡಾಂಗಣದಲ್ಲಿ ಅವರು ಗಳಿಸಿದ ರನ್, ಕ್ಯಾಚ್‌ಗಳ ಸಂಖ್ಯೆ, ರನ್‌ಔಟ್‌ಗಳು ಮತ್ತು ಗಳಿಸಿದ ವಿಕೆಟ್‌ಗಳು ಇದಕ್ಕೆ ಮಾನದಂಡವಾಗಿರುತ್ತದೆ.ಇಲ್ಲಿ ಗೆದ್ದ ಫ್ಯಾಂಟಸಿ ಲೀಗ್‌ನ ತಂಡದ ಮಾಲೀಕರಿಗೆ ಐಪಿಎಲ್ ಮ್ಯಾಚ್‌ನ ಟಿಕೆಟ್‌ಗಳು ಮತ್ತು ಉಡುಗೊರೆ ಸಿಗಲಿವೆ. ಅತಿ ಹೆಚ್ಚು ಅಂಕ ಪಡೆದ ಕಾಲ್ಪನಿಕ ತಂಡವು `ಫ್ಯಾಂಟಸಿ ಲೀಗ್'ನ್ನು ಜಯಿಸಲಿದೆ.

ಪ್ರತಿಕ್ರಿಯಿಸಿ (+)