`ದುಡ್ಡು ಕೊಟ್ಟು ವಿಷ ಸೇವಿಸಬೇಡಿ'

7
ಅತಿಥಿಯೊಂದಿಗೆ ಮಾತುಕತೆ

`ದುಡ್ಡು ಕೊಟ್ಟು ವಿಷ ಸೇವಿಸಬೇಡಿ'

Published:
Updated:

ಗುಲ್ಬರ್ಗ: ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕಗಳ ಮೂಲಕ ಶುದ್ಧ ಕುಡಿಯುವ ನೀರು ಕುಡಿಯುತ್ತೇವೆ. ಶುದ್ಧ ಮತ್ತು ತಾಜಾ ಹಾಲು, ಬೆಣ್ಣೆ ಖರೀದಿಸುತ್ತಿದ್ದೇವೆ, ಉತ್ತಮ ಖಾರದ ಪುಡಿ ಸಿಗುತ್ತಿದೆ ಎಂದು ನಂಬಿದರೆ ಖಂಡಿತ ನೀವು ಮೋಸಹೋಗುತ್ತಿದ್ದೀರಿ ಎಂಥಲೇ ಅರ್ಥ! ನಮ್ಮ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿರುವ ಇಂಥ ಉತ್ಪಾದನಾ ಘಟಕಗಳು ಅಂತರ ರಾಷ್ಟ್ರೀಯ ಗುಣಮಟ್ಟ ಮತ್ತುಹೂಡಿಕೆ (ಐಎಸ್‌ಐ) ಮಾನ್ಯತೆ ಪಡೆದಿರುವುದಿಲ್ಲ. ಮೇಲಾಗಿ ಅಧಿಕೃತ ಪ್ರಯೋಗಾಲಯದಿಂದ ಪರೀಕ್ಷೆಗೊಳಪಟ್ಟಿರುವುದಿಲ್ಲ. ದುಡ್ಡು ಕೊಟ್ಟು ವಿಷ ಸೇವಿಸಬೇಡಿ ಎಂಬುದು ಪ್ರಜಾಂದೋಲನ ಗ್ರಾಹಕರ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಲೋಚನೇಶ ಬಿ. ಹೂಗಾರ  ಅವರ ಅಭಿಮತ.ರಾಜ್ಯದಲ್ಲಿರುವ ಸುಮಾರು 2,500 ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕಗಳು ಐ.ಎಸ್.ಐ. ಮಾನ್ಯತೆ ಪಡೆದಿರುವುದಿಲ್ಲ. ಗುಲ್ಬರ್ಗ ನಗರ ಮತ್ತು ಜಿಲ್ಲೆಯಲ್ಲಿ ಒಟ್ಟು 84 ಅನಧಿಕೃತ ನೀರು ಶುದ್ಧೀಕರಿಸಿ ಮಾರಾಟ ಮಾಡುವ ಘಟಕಗಳಿವೆ ಎಂಬ ವಿಷಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು. ಧಾರವಾಡ ಜಿಲ್ಲೆಯ ಕಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ಲೋಚನೇಶ ಹೂಗಾರ (57) ಪತ್ರಕರ್ತನ ಹುದ್ದೆಯಿಂದ ಹೋರಾಟದ ಹಾದಿ ತುಳಿದವರು. ಜನ್ಮಭೂಮಿ ಎಂಬ ಸ್ವಯಂ ಸೇವಾ ಸಂಘ ಸ್ಥಾಪಿಸುವ ಮೂಲಕ ಕಲಘಟಗಿ, ಹಳಿಯಾಳ, ಹಾವೇರಿ, ಸವಣೂರು ಮುಂತಾದೆಡೆ ಇರುವ ಗುಡ್ಡಗಾಡು ಪ್ರದೇಶದ ಜನರಿಗೆ ಆರೋಗ್ಯ ಚಿಕಿತ್ಸೆ ದೊರೆಯುವಂತೆ ಮಾಡಿದವರು. ಇದರ ಪ್ರೇರಣೆ ಪಡೆದು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಲೋಚನೇಶ, ಇಂದಿನ ಬಹುತೇಕ ಆಹಾರ ಉತ್ಪಾದನಾ ಪದಾರ್ಥಗಳಲ್ಲಿ ಕಲಬೆರಿಕೆ ಹೇಗಾಗುತ್ತದೆ. ನಿಜ ಅರ್ಥದಲ್ಲಿ ನಾವು ಆ ಪದಾರ್ಥಗಳನ್ನು ಸೇವಿಸುವುದು ಒಳಿತೇ? ಎಂಬುದರ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು. ಪ್ರ.ಜಾ: ಹೋರಾಟದ ಹಾದಿ?

ಹೂಗಾರ: ಚಹಾಪುಡಿ, ಸಿಮೆಂಟ್, ಹಾಲು, ಖಾರದಲ್ಲಿನ ಕಲಬೆರಕೆ ವಿರುದ್ಧ ಹೋರಾಟ ಮಾಡಿದ್ದೇನೆ.ಪ್ರ.ಜಾ: ಕಲಬೆರಕೆ ಹೇಗೆ ಮಾಡುತ್ತಾರೆ?

ಹೂಗಾರ:  ಚಹಾಪುಡಿಯಲ್ಲಿ ಕಟ್ಟಿಗೆ ಪುಡಿ, ಸಿಮೆಂಟ್‌ನಲ್ಲಿ ಕರಿ ಕಲ್ಲಿನ ಪುಡಿ, ಹಾಲಿನಲ್ಲಿ ಯೂರಿಯಾ, ನೊರೆ ಬರುವ ಪುಡಿ, ಖಾರದಲ್ಲಿ ಅರಿಶಿಣ ಪುಡಿಪ್ರ.ಜಾ: ಹೋರಾಟ ಯಶಸ್ವಿ ಕಂಡಿದೆಯಾ?

ಹೂಗಾರ:  ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಮತ್ತು ಅನಧಿಕೃತ ಮಾರಾಟಗಾರರ ಮೇಲೆ ದಾಳಿ ಮಾಡಿ ಅಂತಹ ಮಾರಾಟವನ್ನು ತಡೆ ಹಿಡಿದಿದ್ದಾರೆ. ಕಲಬೆರಕೆ ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಎಲ್ಲ ಹೋರಾಟಗಳು ಸಂಪೂರ್ಣವಾಗಿ ಯಶಸ್ವಿ ಕಂಡಿವೆ. ಪ್ರ.ಜಾ: ಕಲಬೆರಕೆ ಮಾಡುವ ಉತ್ಪಾದಕ ಸಂಸ್ಥೆಗಳೊಂದಿಗೆ ರಾಜಿ ಮಾಡಿಕೊಂಡಿಲ್ಲವೇ?

ಹೂಗಾರ:  ಖಂಡಿತ ಇಲ್ಲ! ಈ ರೀತಿಯ ಸಾಮಾಜಿಕ ಸೇವೆ ಮಾಡಲು ಹುಬ್ಬಳ್ಳಿಯ `ವಿ-ಟೆಕ್ ಇಂಡಸ್ಟ್ರೀಯಲ್ ವ್ಯಾಲ್ಸ್ಯೂ' ಎನ್ನುವ ಸಂಸ್ಥೆ ತನ್ನ ಲಾಭದಲ್ಲಿ ನಮ್ಮ ಸಮಿತಿಗೆ ಹಣ ನೀಡುತ್ತದೆ.ಪ್ರ.ಜಾ: ಹಾಗಾದರೆ ನಿಮಗೆ ಬೆದರಿಕೆ ಬಂದಿಲ್ಲವೇ?

ಹೂಗಾರ: ಮೂಲತಃ ಪತ್ರಕರ್ತನಾಗಿರುವುದರಿಂದ ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ. ಮೇಲಾಗಿ ಅಂತಹ ಬೆದರಿಕೆ ಎದುರಿಸುವ ತಾಕತ್ತು ನಮ್ಮ ಬಳಿ ಇದೆ.ಪ್ರ.ಜಾ: ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯುವುದಿಲ್ಲವೇ?

ಹೂಗಾರ: ಬಹುತೇಕವಾಗಿ ಇಲ್ಲ. ಅಂತೆಯೇ ಇಂತಹ ಅನಧಿಕೃತ ಘಟಕಗಳ ವಿರುದ್ಧ ಹೈಕೋರ್ಟ್ ಮೊರೆ ಹೋಗಿರುವೆ.ಪ್ರ.ಜಾ: ದಾಖಲೆಗಳು ಎಲ್ಲಿಂದ ಒದಗಿಸುತ್ತೀರಿ?

ಹೂಗಾರ:  ಮಾಹಿತಿ ಹಕ್ಕು ಕಾಯ್ದೆ-2005ರ ಅಡಿಯಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೋರಿ ದಾಖಲೆ ಪಡೆಯುತ್ತೇನೆ. ನಮ್ಮ ಗೆಳೆಯರ ಬಳಗದಿಂದ ಅದನ್ನು ಸಮೀಕ್ಷೆ ಮಾಡಿಸಿದ ನಂತರ ಹೋರಾಟಕ್ಕೆ ಮುಂದಾಗುತ್ತೇನೆಪ್ರ.ಜಾ: ಮಾಹಿತಿ ಹಕ್ಕು ಕಾಯ್ದೆ ದುರುಪಯೋಗ ಮಾಡಿಕೊಂಡಿಲ್ಲವೇ?

ಹೂಗಾರ: ಜನಸಾಮಾನ್ಯರ ಪ್ರಬಲ ಅಸ್ತ್ರವಾಗಿರುವ ಮಾಹಿತಿ ಹಕ್ಕು ಕಾಯ್ದೆ ನಾವು ಬಳಸಿಕೊಂಡಂತಿದೆ. ಅದನ್ನು ಜನಸಮಾನ್ಯರ ಒಳಿತಿಗೆ ಬಳಸಬೇಕು ಎಂಬುದೇ ನನ್ನ ಪ್ರಾರ್ಥನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry