ದುಪ್ಪಟ್ಟು ಬೆಲೆಗೆ ಬೀಜ ಮಾರಾಟ: ದಾಳಿ

ಗುರುವಾರ , ಜೂಲೈ 18, 2019
27 °C

ದುಪ್ಪಟ್ಟು ಬೆಲೆಗೆ ಬೀಜ ಮಾರಾಟ: ದಾಳಿ

Published:
Updated:

ಸಿಂದಗಿ: ಬೀಜದ ದರ ಇದ್ದುದು ರೂ 930 ಮಾತ್ರ. ಆದರೆ ರೈತರಿಂದ ಅಗ್ರೋ ಕೇಂದ್ರದ ಮಾಲಿಕ ಪಡೆಯುತ್ತಿರುವುದು ರೂ.2200ರಷ್ಟು.ಈ ಘಟನೆ ಮಂಗಳವಾರ ಸಂಜೆ ನಡೆದಿರುವುದು ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿನ ಧನಲಕ್ಷ್ಮೀ ಅಗ್ರೋ ಕೇಂದ್ರದಲ್ಲಿ.ಕನಕ ಬಿ.ಟಿ ಹತ್ತಿ ಬೀಜವನ್ನು ಖರೀದಿಸಲು ಬಂದ ರೈತರಿಂದ ದುಪ್ಪಟ್ಟು ದರವನ್ನು ಪಡೆದ ಅಗ್ರೋ ಕೇಂದ್ರದ ಮೇಲೆ ರೈತ ಸಂಘದ ಮುಖಂಡರು ನೀಡಿದ ಮಾಹಿತಿ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ಎಚ್.ವೈ. ಸಿಂಗೆಗೋಳ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು.ಕನಕ ಬಿ.ಟಿ ಹತ್ತಿ ಬೀಜದ ಪಾಕೆಟ್‌ಗಳನ್ನು ಅಧಿಕ ದರದಲ್ಲಿ ಖರೀದಿಸಿದ ರೈತರಿಗೆ ಹಣ ಮರಳಿಸುವಂತೆ ಅಧಿಕಾರಿಗಳು ಸೂಚಿಸಿದರು. ಅಲ್ಲದೇ ಆಗ್ರೋ ಕೇಂದ್ರಕ್ಕೆ ಬೀಜ ಮಾರಾಟ ನಿಷೇಧಿಸುವುದಾಗಿ ತಿಳಿಸಿದರು.

ಪಟ್ಟಣದ ಬಹುತೇಕ ಅಗ್ರೋ ಕೇಂದ್ರಗಳಲ್ಲಿ ಬಿತ್ತನೆಯ ಬೀಜವನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.ಬೀಜ ಪಡೆದಿದ್ದ ಹಂಚಿನಾಳದ ಶ್ರೀಶೈಲ ಹಂಚಿನಾಳ, ದೇವರನಾವದಗಿ ಗ್ರಾಮದ ಸಂತೋಷ ಸಿಂದಗಿ, ಗುತ್ತರಗಿ ಗ್ರಾಮದ ಉಪೇಂದ್ರ ಬಿರಾದಾರ, ಸಿದ್ದು ಬಂಡಿವಡ್ಡರ, ದತ್ತು ಜೇವರ್ಗಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry