ದುಬಾರಿ ರಂಗಮಂದಿರ

7

ದುಬಾರಿ ರಂಗಮಂದಿರ

Published:
Updated:

ಗುಲ್ಬರ್ಗದ ಎಸ್.ಎಂ.ಪಂಡಿತ್ ರಂಗಮಂದಿರ ಆಧುನಿಕ ಪೀಠೋಪಕರಣಗಳಿಂದ ಸುಸಜ್ಜಿತಗೊಂಡಿದೆ. ಈ ರಂಗಮಂದಿರ ಆರಂಭವಾದಾಗಿನಿಂದ ಅಲ್ಲಿ ಕಲಾ ಚಟುವಟಿಕೆಗಳು ಹೆಚ್ಚು  ಕ್ರಿಯಾಶೀಲವಾಗಿವೆ. ಇತ್ತೀಚೆಗೆ 5 ದಿನಗಳ  ರಂಗೋತ್ಸವ ಯಶಸ್ವಿಯಾಗಿ ನಡೆಯಿತು.ಆದರೆ ಇಲ್ಲಿ ಕಾರ್ಯಕ್ರಮ ನಡೆಸುವ ಎಲ್ಲಾ ಸಂಘಟಕರ ಅಳಲು ಒಂದೇ. ರಂಗಮಂದಿರ ಬಾಡಿಗೆ ದುಬಾರಿ ಎಂದು. ದಿನಕ್ಕೆ 15,000 ರೂ ಬಾಡಿಗೆ ನಿಗದಿ ಮಾಡಲಾಗಿದೆ.ಗುಲ್ಬರ್ಗದಂತಹ ಸಣ್ಣ ನಗರದಲ್ಲಿ ಇಷ್ಟು ದೊಡ್ಡ ಮೊತ್ತದ ಬಾಡಿಗೆ ತೆತ್ತು ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಷ್ಟ. ಕನ್ನಡ ಮತ್ತು ಸಂಸ್ಕೃತಿ ಸಚಿವರು ರಂಗಮಂದಿರದ ಬಾಡಿಗೆ ಕಡಿಮೆ ಮಾಡುವ ಬಗ್ಗೆ ಗಮನ ಹರಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry