ಶುಕ್ರವಾರ, ನವೆಂಬರ್ 15, 2019
20 °C

ದುಬಾರೆ: ಅನಾರೋಗ್ಯ- ಆನೆ ಸಾವು

Published:
Updated:

ಕುಶಾಲನಗರ: ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ 25 ವರ್ಷದ ಗಂಡಾನೆಯೊಂದು ಅನಾರೋಗ್ಯದಿಂದಾಗಿ ಗುರುವಾರ ರಾತ್ರಿ ಸಾವನ್ನಪ್ಪಿದೆ.ದುಬಾರೆ ಮೀಸಲು ಅರಣ್ಯ ಪ್ರದೇಶದ ಮಾಲ್ದಾರೆ ಅವರೆಗುಂದಿ ಹಾಡಿಯ ಘಟ್ಟದಾಳು ಬೀಟಿನಲ್ಲಿ ಆನೆ  ಮೃತಪಟ್ಟಿದೆ. ಕಳೆದ ಕೆಲವು ದಿನಗಳಿಂದ ಈ ಆನೆ ಅನಾರೋಗ್ಯದಿಂದ ಬಳಲುತ್ತಿತ್ತು. ಇದೇ ಕಾರಣಕ್ಕಾಗಿ ಗುರುವಾರ ಪ್ರಾಣ ಬಿಟ್ಟಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಅಚ್ಚಪ್ಪ ತಿಳಿಸಿದ್ದಾರೆ.ಶುಕ್ರವಾರ ಬೆಳಿಗ್ಗೆ ಬೀಟ್ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಆನೆ ಸತ್ತಿರುವುದು ಗಮನಕ್ಕೆ ಬಂತು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಅಚ್ಚಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ವಣ್ಯಜೀವಿ  ವೈದ್ಯಾಧಿಕಾರಿ ಉಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಳೆದ ತಿಂಗಳು ಇದೇ ಸ್ಥಳದಲ್ಲಿ ಒಂಟಿಸಲಗವೊಂದು ಅನಾರೋಗ್ಯದ ಕಾರಣ ಮೃತಪಟ್ಟಿತ್ತು.

ಪ್ರತಿಕ್ರಿಯಿಸಿ (+)