ಶನಿವಾರ, ಮೇ 28, 2022
26 °C

ದುರುಗಮ್ಮಗೆ ಬೇರಿನ ಗುಡಿ

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

ಲಿಂಗಸುಗೂರ:  ಯಾವುದೇ ಒಂದು ಕಟ್ಟಡದಲ್ಲಿ ಗಿಡಮರಗಳು ಬೆಳೆದರೆ ಅಂತಹ ಕಟ್ಟಡ ಶಿಥಿಲಗೊಳ್ಳುವುದು ಸಾಮಾನ್ಯ. ಆದರೆ, ತಾಲ್ಲೂಕಿನ ಹನುಮಗುಡ್ಡ (ಹೊಸೂರು) ಗ್ರಾಮದಲ್ಲಿ ವಿವಿಧ ಮರಗಳ ಬೇರುಗಳ ಹಿಡಿತದಲ್ಲಿ ದುರುಗಮ್ಮದೇವಿ ಗುಡಿ ಸುಭದ್ರವಾಗಿ ನಿಂತಿರುವುದು ವಿಸ್ಮಯ ಮೂಡಿಸಿದೆ.ತಲೆ ತಲೆಮಾರುಗಳಿಂದಲೂ ಬಸರಿ, ಬೇವಿನ ಮತ್ತು ಚೌಡಚಿ ಗಿಡಗಳ ಬುಡದಲ್ಲಿಯೆ ದುರುಗಮ್ಮ ಗುಡಿ ತಲೆ ಎತ್ತಿ ನಿಂತಿದೆ. ಮೂರು ಗಿಡಗಳ ಬೇರುಗಳು ಕಟ್ಟಡದ ಹೊರ ಮತ್ತು ಒಳ ಮೈಗೆ ಬೆಸೆದಂತೆ ಕಂಡು ಬರುತ್ತವೆ. ಬಸರಿ ಗಿಡದ ಬೇರು ಮುಖ್ಯದ್ವಾರಕ್ಕೆ ತೋರಣವಾಗಿ ಬೆಳೆದು ನಿಂತಿದೆ. ಕಟ್ಟಡದ ಹೊರಮೈ ಸುತ್ತ ಬೇರುಗಳು ಗಟ್ಟಿಯಾಗಿ ಗುಡಿಯನ್ನು ರಕ್ಷಿಸುವಂತೆ ಹೆಣೆದುಕೊಂಡಿರುವುದು ವಿಶೇಷ.ಹಳೆಯ ಗುಡಿಯ ಹೊರಗಡೆ ಮತ್ತು ಒಳಗಡೆ ಬೇರುಗಳು ಕಾಣಸಿಗುವುದಿಲ್ಲ. ಇಷ್ಟೆಲ್ಲಾ ಬೇರುಗಳು ಇದ್ದರು ಕೂಡ ಅವುಗಳೆಲ್ಲ ಒಳ ಮತ್ತು ಹೊರ ಮೈ ಗೋಡೆಗಳಿಗೆ ಹೆಣೆದುಕೊಂಡಿರುವುದು ಪವಾಡ ಎನ್ನುತ್ತಾರೆ ಗ್ರಾಮಸ್ಥರಾದ ಶಂಕರಗೌಡ, ವೆಂಕನಗೌಡ, ಹುಲಗಪ್ಪ ಮಹಿಮೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.